Saturday, December 14, 2024
Homeಮನೋರಂಜನೆಗಾಸಿಪ್​ರೋಹ್ಮನ್ ಜೊತೆಗಿನ ಸಂಬಂಧ ಕೊನೆಗೊಂಡಿದೆ ಎಂದು ಘೋಷಿಸಿದ ಬಾಲಿವುಡ್ ನಟಿ ಸುಶ್ಮಿತಾ ಸೇನ್

ರೋಹ್ಮನ್ ಜೊತೆಗಿನ ಸಂಬಂಧ ಕೊನೆಗೊಂಡಿದೆ ಎಂದು ಘೋಷಿಸಿದ ಬಾಲಿವುಡ್ ನಟಿ ಸುಶ್ಮಿತಾ ಸೇನ್

700

ಮುಂಬೈ: ರೋಹ್ಮನ್‌ ಜತೆಗಿನ ನನ್ನ ಸಂಬಂಧ ಕೊನೆಗೊಂಡಿದೆ ಎಂದು 1994ರ ಮಿಸ್ ಯೂನಿವರ್ಸ್, ನಟಿ ಸುಶ್ಮಿತಾ ಸೇನ್ ಘೋಷಿಸಿದಿದ್ದಾರೆ. ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ಆಗಿದೆಯಂತೆ ಎಂದು ಹಬ್ಬಿದ್ದ ವದಂತಿ ಈಗ ನಿಜವಾಗಿದೆ.

ರೂಪದರ್ಶಿಯಾಗಿರುವ ಬಾಯ್ ಫ್ರೆಂಡ್ ರೋಹ್ಮನ್ ಶಾವ್ಲೂ ಜೊತೆಗಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಬಹುದಿನಗಳ ಹಿಂದೆಯೇ ನಮ್ಮಿಬ್ಬರ ನಡುವಿನ ಸಂಬಂಧ ಕೊನೆಗೊಂಡಿದೆ. ನಾವೀಗ ಸ್ನೇಹಿತರಾಗಿ ಉಳಿದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ನಮ್ಮಿಬ್ಬರ ಸಂಬಂಧ ಸ್ನೇಹದಿಂದ ಪ್ರಾರಂಭವಾಯಿತು. ನಾವು ಈಗಲೂ ಸ್ನೇಹಿತರಾಗಿಯೇ ಇದ್ದೇವೆ. ನಮ್ಮಿಬ್ಬರ ನಡುವಿನ ಸಂಬಂಧ ಬಹಳ ಕಾಲದ ಹಿಂದೆಯೇ ಕೊನೆಗೊಂಡಿದೆ. ಪ್ರೀತಿ ಉಳಿದಿದೆ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದು ಎಲ್ಲಾ ರೂಮರ್ಸ್ ಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.

ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್ 2018ರಲ್ಲಿ ಡೇಟಿಂಗ್‍ನಲ್ಲಿದ್ದರು. ರೋಹ್ಮನ್ ಅನೇಕ ಉನ್ನತ ವಿನ್ಯಾಸಕಾರರಿಗೆ ರ್ಯಾಂಪ್ ವಾಕ್ ಮಾಡಿದ್ದಾರೆ. ಸುಶ್ಮಿತಾ ಸೇನ್, ರೋಹ್ಮನ್ ಹಲವು ಬಾರಿ ಒಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದರು.

ಸುಶ್ಮಿತಾ ಸೇನ್ ಆರ್ಯ ಎಂಬ ವೆಬ್-ಸರಣಿಯೊಂದಿಗೆ ಮರು ಪಾದರ್ಪಣೆ ಮಾಡಿದರು. ಇದು ಈ ವರ್ಷ ಅಂತರರಾಷ್ಟ್ರೀಯ ಎಮ್ಮಿಗಳಲ್ಲಿ ಅತ್ಯುತ್ತಮ ನಾಟಕ ಸರಣಿ ವಿಭಾಗದಲ್ಲಿ ನಾಮನಿರ್ದೇಶನಗೊಂಡಿತು. ಅವರು ಕೊನೆಯ ಬಾರಿಗೆ ಆರ್ಯ ಎರಡನೇ ಸೀಸನ್ ನಲ್ಲಿ ಕಾಣಿಸಿಕೊಂಡರು. ಡಿಸೈನರ್ ಮನೀಶ್ ಮಲ್ಹೋತ್ರಾ ಮತ್ತು ಹಾಸ್ಯನಟ ಮಲ್ಲಿಕಾ ದುವಾ ಅವರೊಂದಿಗೆ ಟಿವಿ ರಿಯಾಲಿಟಿ ಶೋ ಫ್ಯಾಷನ್ ಸೂಪರ್‍ಸ್ಟಾರ್‍ನಲ್ಲಿ ತೀರ್ಪುಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡರು.

ಸುಶ್ಮಿತಾ ಸೇನ್ ಮಗಳು ಆಲೀಸಾ 2010ರಲ್ಲಿ ಜನಿಸಿದರು. ಸುಶ್ಮಿತಾ 2000ದಲ್ಲಿ ರೆನೀಯನ್ನು ದತ್ತು ಪಡೆದರು. ರೆನೀ ಈ ವರ್ಷ ಕಿರುಚಿತ್ರದೊಂದಿಗೆ ತಮ್ಮ ನಟನಾ ವೃತ್ತಿ ಆರಂಭಿಸಿದ್ದಾರೆ.

ಸುಶ್ಮಿತಾ ಸೇನ್ 1994 ರಲ್ಲಿ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಅವರು 1996ರ ಚಲನಚಿತ್ರ ದಸ್ತಕ್ ಮೂಲಕ ಬಾಲಿವುಡ್‍ಗೆ ಪಾದಾರ್ಪಣೆ ಮಾಡಿದರು. ಬಿವಿ ನಂ 1, ಡು ನಾಟ್ ಡಿಸ್ಟರ್ಬ್, ಮೈ ಹೂ ನಾ, ಮೈನೆ ಪ್ಯಾರ್ ಕ್ಯೂನ್ ಕಿಯಾ ಮತ್ತು ತುಮ್ಕೋ ನಾ ಭೂಲ್ ಪಾಯೆಂಗೆ ಮತ್ತು ನೋ ಪ್ರಾಬ್ಲಂ ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.