Saturday, December 14, 2024
Homeವೈವಿಧ್ಯಕೃಷಿಲದ್ದಿಹುಳು ಬಾಧೆ,ಸುಳಿರೋಗ: ಬಿಳಿಜೋಳ ಬೆಳೆಗಾರರು ಕಂಗಾಲು

ಲದ್ದಿಹುಳು ಬಾಧೆ,ಸುಳಿರೋಗ: ಬಿಳಿಜೋಳ ಬೆಳೆಗಾರರು ಕಂಗಾಲು

ಬೆಂಗಳೂರು: ರಾಜ್ಯದ ವಿವಿಧೆಡೆ ಅಕಾಲಿಕವಾಗಿ ಸುರಿದ ಮಳೆಗೆ ಬಿಳಿಜೋಳಕ್ಳೆ ಲದ್ಜಿಹುಳು ಕಾಟ ಶುರುವಾಗಿದೆ. ಸುಳಿರೋಗ ಕಾಡುತ್ಳಿದೆ. ಮೆಕ್ಕೆಜೋಳ, ತೊಗರಿ ಬೆಳೆಗಳು ಹಾನಿಗೀಡಾಗಿವೆ.

ಬಿಳಿಜೋಳ, ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧೆ, ಶಿಲೀಂಧ್ರಬಾಧೆ ಕಾಣಿಸಿಕೊಂಡರೆ ತೊಗರಿ ಬೆಳೆ ಗಿಡದಲ್ಲೇ ಮೊಳಕೆಯೊಡೆಯುತ್ತಿದೆ. ರಾಯಚೂರಿನಲ್ಲಿ ಇದೇ ಮೊದಲ ಬಾರಿಗೆ ಬಿಳಿಜೋಳಕ್ಕೆ ‘ಸುಳಿರೋಗ’ ಕಾಣಿಸಿಕೊಂಡಿದೆ. ಬೀದರ್‌ ಜಿಲ್ಲೆಯಲ್ಲಿ ತೊಗರಿಗೆ ‘ಹಸಿರು ಕಾಯಿಕೊರಕ’ ಬಾಧೆ ಕಂಡುಬಂದಿದೆ.

ಧಾರವಾಡ ಜಿಲ್ಲೆಯಲ್ಲಿ ಬಿಳಿಜೋಳದ ಎಲೆಗಳು ತೇವಾಂಶ ಹೆಚ್ಚಳದಿಂದ ಹಳದಿ ಬಣ್ಣಕ್ಕೆ ತಿರುಗಿವೆ. ಕೊಪ್ಪಳ, ಬಾಗಲಕೋಟೆ, ಕಲಬುರಗಿಯ ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಬಿಳಿಜೋಳಕ್ಕೆ ಅಲ್ಲಲ್ಲಿ ಲದ್ದಿ ಹುಳು ಬಾಧೆ ಕಾಣಿಸಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ ಮೆಕ್ಕೆಜೋಳ ಫಸಲು ಶಿಲೀಂಧ್ರಬಾಧೆಗೆ ತುತ್ತಾಗಿದೆ. ಕಾಳುಗಳನ್ನು ಒಣಗಿಸಲು ಮಳೆ ಅಡ್ಡಿಪಡಿಸಿದ್ದು, ಹೆಚ್ಚಿನ ತೇವಾಂಶದ ಕಾರಣ ಕಾಳುಗಳು ಹಾಳಾಗಿವೆ. ನೀರಿನಲ್ಲಿ ನೆನೆದ ಜೋಳದ ತೆನೆಗಳು ಮೊಳಕೆಯೊಡೆದು ಗಿಡದಲ್ಲೇ ಹಾಳಾಗಿವೆ. ತೊಗರಿ ಕಾಯಿ ತೇವಗೊಂಡು ಉಬ್ಬಿ ಸಿಪ್ಪೆ ಸುಲಿದು ಕಾಳು ಹೊರಬಂದು ಮೊಳಕೆಯೊಡೆದಿದೆ.