ಲಿಂಗತ್ವ ಅಲ್ಪಸಂಖ್ಯಾತರ ಸಮುದಾಯದ ಚೈತ್ರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಹೋರಾಟಗಾರ್ತಿ ಚೈತ್ರ ಎಸ್‌. ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.

ಬುದ್ಧ ಬಸವ ಅಂಬೇಡ್ಕರ್ ಅನುಯಾಯಿ,ಪ್ರಗತಿಪರ ಚಿಂತಕಿ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆಯ ರಾಜ್ಯ ಸಮಿತಿ ಸದಸ್ಯೆ, ದಾವಣಗೆರೆ ಜಿಲ್ಲೆಯ ಅಭಯ ಸ್ಪಂದನ ಲೈಂಗಿಕ/ ಲಿಂಗತ್ವ ಅಲ್ಪಸಂಖ್ಯಾತರ ಸಂಸ್ಥೆಯ ಜಿಲ್ಲಾ ಅಧ್ಯಕ್ಷರಾಗಿ ಚೈತ್ರ ಕೆಲಸ ಮಾಡುತ್ತಿದ್ದಾರೆ.

ಚೈತ್ರ, ನಿನ್ನ ಪ್ರಾಮಾಣಿಕ ಪ್ರಯತ್ನ ಮತ್ತು ನಿರಂತರವಾದ ಹೋರಾಟಕ್ಕೆ ಸಂದ ಗೌರವ ಇದು. ಯಾವ ಜಾಗದಲ್ಲಿ ಅವಮಾನ ಕಣ್ಣೀರು ಹಾಕಿದ್ದಿಯೋ ಅದೇ ಜಾಗದಲ್ಲಿ ನಿನಗೆ ಸರಕಾರದ ಗೌರವ ಸಿಗುತ್ತಿದೆ. ಇದೆ ಅಲ್ವಾ ನಿಜವಾದ ಭೀಮ ಶಕ್ತಿ ಅಂದ್ರೆ. ನಿನ್ನ ಸಾಮಾಜಿಕ ಹೋರಾಟವನ್ನು ಗುರುತಿಸಿ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಗೆ ನಿನ್ನನ್ನು ಆಯ್ಕೆ ಮಾಡಿದ ಸಮಿತಿಗೆ, ಬೆಂಬಲ ಸೂಚಿಸಿದ ಎಲ್ಲ ಪ್ರಗತಿಪರ ಬಳಗಕ್ಕೆ ಅಭಿನಂದನೆ ಎಂದು ಕೆಎಸ್‌ಎಂಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷತಾ ಕೆ.ಸಿ. ತಿಳಿಸಿದ್ದಾರೆ.