ರಿಯಾದ್: ಕಾನೂನು, ಸಮಾಜಿಕ ಮತ್ತು ಮಾನವೀಯ ಸೇವಾಕಾರ್ಯಗಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ, ಉಡುಪಿಮೂಲದ ಪ್ರಸ್ತುತ ಸೌದಿ ಅರೇಬಿಯಾದ ರಿಯಾದ್ ನ ರಕ್ಷಣಾ ಕಂಪೆನಿಯಲ್ಲಿ ಕಾನೂನು ಸಲಹೆಗಾರರಾಗಿ ಉದ್ಯೋಗ ಮಾಡುತ್ತಿರುವ ವಕೀಲರೂ,ಸಮಾಜಸೇವಕರೂ ಆದ ಪಿ.ಎ. ಹಮೀದ್ ಪಡುಬಿದ್ರಿಯವರಿಗೆ,
‘ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ’ (Global Human Peace University) ವತಿಯಿಂದ “ಗೌರವ ಡಾಕ್ಟರೇಟ್” ನೀಡಲಾಗಿದೆ.
ಜತೆಗೆ, ತಾವು ಹೊಂದಿರುವ ಕಾನೂನು ಶಿಕ್ಷಣದ ಮುಖೇನ ಜನರಿಗೆ ಅವಿರತ ಸಹಾಯಮಾಡಿ ಗಣನೀಯ ಸೇವೆಗೈದ ಪಿ.ಎ.ಹಮೀದ್ ರವರಿಗೆ “APJ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿ” ಯನ್ನೂ ಪ್ರದಾನ ಮಾಡಲಾಗಿದೆ.
ನಿನ್ನೆ (ದಿ.09/04/2022) ತಮಿಳುನಾಡಿನ ಕೋಯಂಬತ್ತೂರಿನ ಸಿಟ್ರ (SITRA) ಸಭಾಂಗಣದಲ್ಲಿ ನಡೆದ ಘಟಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿ.ಎ.ಹಮೀದ್ ರವರು ನೇರವಾಗಿ ಸೌದಿ ಅರೇಬಿಯಾದಿಂದ ಆಗಮಿಸಿ ಈ ಗೌರವನ್ನು ಸ್ವೀಕರಿಸಿರುತ್ತಾರೆ.
ತಮ್ಮ ದೈನಂದಿನ ಕಂಪೆನಿಯ ಕೆಲಸದ ನಿಬಿಢತೆಯ ಜೊತೆಗೆ, ಸಮಾಜಸೇವೆಯನ್ನು ಕಾಯಕಮಾಡಿಕೊಂಡು,
ಬೇರೆಬೇರೆ ಭಾಗಗಳಲ್ಲಿರುವ ಅನಿವಾಸಿ ಭಾರತೀಯರ ವಿವಿಧ ಸಮಸ್ಯೆ ಮತ್ತು ಸಂಕಷ್ಟಗಳಿಗೆ ಸ್ಪಂದಿಸಿ,ಅವನ್ನು ಪರಿಹರಿಸುವಲ್ಲಿ ಡಾ.ಪಿ.ಎ.ಹಮೀದ್ ರವರು ಮಾಡುತ್ತಿರುವ ಮಾನವೀಯ ಸೇವೆಯನ್ನು ಗುರುತಿಸಿದ ಚೆನ್ನೈ ಮೂಲದ ‘ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿ’ (GHPU) ಈ ಪ್ರತಿಷ್ಠಿತ ಗೌರವವನ್ನು ನೀಡಿದೆ.
ಮೂಲತಃ: ಉಡುಪಿ ಜಿಲ್ಲೆಯ ಪಡುಬಿದ್ರಿಯವರಾದ ಡಾ. ಪಿ.ಎ.ಹಮೀದ್ ರವರು ಬಹಳ ಚಿಕ್ಕಂದಿನಲ್ಲೇ ಸಮಾಜಸೇವಾ ಕಾರ್ಯವನ್ನು ರಕ್ತಗತ ಮಾಡಿಕೊಂಡವರು.ಶಾಲಾ- ಕಾಲೇಜು ದಿನಗಳಲ್ಲಿ ಇದನ್ನವರು ತಮ್ಮ ಕಲಿಕೆಯ ಜೊತೆಜೊತೆಯಾಗಿ ಮುನ್ನೆಲೆಗೆ ತಂದಿದ್ದರು.
ಶಾಲಾ-ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ನಾಯಕರಾಗಿ, ಅನಂತರ ಬೇರೆಬೇರೆ ಸಂಘ-ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಹೊಂದಿದ್ದರು.
ಇವರು ಹವ್ಯಾಸಿ ಪತ್ರಕರ್ತರೂ, ವಕೀಲರೂ ಹಾಗೂ ಕಾರ್ಪೊರೇಟ್ ವಲಯದ ಕಾನೂನು ಸಲಹೆಗಾರರೂ ಆಗಿರುತ್ತಾ,ರೆ.
ರಾಜಕೀಯ, ಸಾಮಾಜಿಕ, ಸಾಮುದಾಯಿಕ, ಸಾಹಿತ್ತಿಕ, ಮಾನವ ಹಕ್ಕುಗಳ ಸಂರಕ್ಷಣೆ… ಇತ್ಯಾದಿ ವಿಭಿನ್ನ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಇವರು 1995-2000ನೇ ಸಾಲಿನ ಉಡುಪಿಯ ಪ್ರಪ್ರಥಮ ತಾಲೂಕು ಪಂಚಾಯತು ಸದಸ್ಯರಾಗಿ ಪಡುಬಿದ್ರಿ ತಾ. ಪಂ. ಕ್ಷೇತ್ರದಿಂದ ಚುನಾಯಿತರಾಗಿದ್ದರು. ಕರ್ನಾಟಕ ರಾಜ್ಯದಲ್ಲೇ ಅಂದಿನ ಅತ್ಯಂತ ಕಿರಿಯ ಚುನಾಯಿತ ತಾ.ಪ.ಸದಸ್ಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಇವರು ತಮ್ಮ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನು ಪಡುಬಿದ್ರಿಯ ಉರ್ದು ಶಾಲೆಯಲ್ಲೂ, ಪ್ರೌಢ ಮತ್ತು ಪಿಯುಸಿಯನ್ನು ಪಡುಬಿದ್ರಿ ಜೂನಿಯರ್ ಕಾಲೇಜ್ ನಲ್ಲೂ ಮುಗಿಸಿ,ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಮಾಡಿರುತ್ತಾರೆ. ಅನಂತರ, ಕಾನೂನು ಪದವಿಯನ್ನು ಮಂಗಳೂರಿನ ಎಸ್ ಡಿ ಯಂ ಲಾ ಕಾಲೇಜ್ ನಲ್ಲಿ ಮುಗಿಸಿರುತ್ತಾರೆ.
ಉಡುಪಿ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ವಕಾಲತ್ತು ಮಾಡುತ್ತಿದ್ದ ಇವರು ಪ್ರಸ್ತುತ ಸೌದಿ ಅರೇಬಿಯಾದ ರಾಜಧಾನಿಯಾದ ರಿಯಾದ್ ನ SAMI (Saudi Arabian Military Industries) Electronics ಎಂಬ ಸೌದಿ ರಕ್ಷಣಾ ಕಂಪೆನಿಯಲ್ಲಿ ಹಿರಿಯ ಕಾನೂನು ಸಲಹೆಗಾರರಾಗಿ ಕಳೆದ 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ನಿವಾಸಿ ಮತ್ತು ಅನಿವಾಸಿ ಭಾರತೀಯರ ಪಾಲಿಗೆ ಓರ್ವ ಆಪತ್ಭಾಂಧವರಾಗಿ ಗುರುತಿಸಲ್ಪಟ್ಟಿರುವ ಡಾ. ಪಿ.ಎ.ಹಮೀದ್ ರವರು ಕಾರ್ಮಿಕ, ಪ್ರಾಯೋಜಕತ್ವ ಹಾಗೂ ಇನ್ನಿತರ ಪ್ರಕರಣಗಳನ್ನು ಕೈಗೈತ್ತಿ ಕೊಂಡು,ಹಲವು ಪ್ರಕರಣಗಳನ್ನು ಪರಿಹರಿಸುವಲ್ಲಿ ಯಶಸ್ವಿಯನ್ನು ಕಂಡಿರುತ್ತಾರೆ.
ಕಳೆದ Covid-19ರ ಸಮಯದಲ್ಲಿ ಸೌದಿ ಅರೇಬಿಯಾಕ್ಕೆ ಹೊರಟು ಪ್ರಯಾಣನಿಷೇಧದ ನಿಮಿತ್ತ ದುಬೈಯಲ್ಲಿ ಸಿಲುಕಿದ್ದ ಭಾರತೀಯರನ್ನು (ಸೌದಿಗೆ) ಕರೆಸುವ ಸಲುವಾಗಿ ಅವಿರತ ಶ್ರಮವಹಿಸಿ, ವಿವಿಧ ರೀತಿಯಲ್ಲಿ ಸಹಾಯಹಸ್ತ ನೀಡಿದ್ಧ ಡಾ. ಹಮೀದ್ ರವರು, ಆ ಸಂದರ್ಭದಲ್ಲಿ ಸೌದಿಯಾದಲ್ಲಿ ಕೋವಿಡ್ ಗೆ ತುತ್ತಾಗಿದ್ದ ಮತ್ತು ಶಂಕಿತ ಪೂರ್ವ-ಕೋವಿಡ್ ರೋಗಕ್ಕೆ ಬೇಕಾದ ವ್ಯವಸ್ಥೆಯನ್ನು ಕಲ್ಪಿಸಿ, ಜನರ ಪಾಲಿಗೆ ಆಶಾಕಿರಣವಾಗಿ ಕೆಲಸ ಮಾಡಿದ್ದರು.
ಅಲ್ಲದೆ, ರಶ್ಯಾ-ಯುಕ್ರೇನ್ ಯುದ್ಧದಾರಂಭದಲ್ಲಿ ಯುಕ್ರೇನ್ ನ ರಾಜಧಾನಿ ಕಿವ್ ಮತ್ತು ಇತರ ಕಡೆಗಳಲ್ಲಿ ಸಂಕಷ್ಟಲ್ಲಿದ್ದ ಭಾರತೀಯರು, ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕ ರೊಂದಿಗೆ ನಿಖಟಸಂಪರ್ಕವನ್ನು ಹೊಂದಿ,ದೆಹಲಿ ವಿದೇಶಾಂಗ ಸಚಿವಾಲಯ ಹಾಗೂ ಯುಕ್ರೇನ್-ಪೋಲ್ಯಾಂಡ್- ಅರ್ಮೇನಿಯಾ-ಸ್ಲುವೇಕಿಯಾ ಮುಂತಾದ ಕಡೆಗಳಲ್ಲಿ ಕಾರ್ಯಾಚಾರಿಸುತ್ತಿದ್ದ
ಭಾರತೀಯ ರಾಯಭಾರಿ ಅಧಿಕಾರಿಗಳೊಂದಿಗೆ ಅವಿರತ ಸಂಪರ್ಕಹೊಂದಿ, ಸುಮಾರು 225 ಮಂದಿಯನ್ನು ಪೋಲ್ಯಾಂಡ್ ಮುಖೇನ “ಏರ್ ಗಂಗಾ ಆಪರೇಷನ್” ಸಹಕಾರದ ಮೂಲಕ ಭಾರತಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು.
ಮನೆಗೆಲಸಕ್ಕೆಂದು (ಖದ್ದಾಂ ಕೆಲಸಕ್ಕೆ) ಏಜಂಟರ ವಿವಿಧ ರೀತಿಯ ಆಮಿಷಕ್ಕೊಳಗಾಗಿ ವಿದೇಶಗಳಲ್ಲಿ ಅದರಲ್ಲೂ ಗಲ್ಫ್ ದೇಶಗಳಲ್ಲಿ ದುಡಿಯುವ ಹಲವಾರು ಮಹಿಳೆಯರ ವಿವಿಧ ಸಮಸ್ಯೆ-ಸಂಕಷ್ಟಗಳನ್ನು ಸೂಕ್ತವಾಗಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅದೇರೀತಿ, ಅನಿವಾಸಿ ಭಾರತೀಯರ ಕಾರ್ಮಿಕ ಹಕ್ಕುಗಳ ಪ್ರಕರಣಕ್ಕೆ ಮತ್ತು ಮಾನವ ಹಕ್ಕುಗಳುಲ್ಲಂಘನೆ ಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕಾನೂನು ರೀತಿಯ ಮುಖಾಂತರ ಕೈಗೆತ್ತಿಕೊಂಡು ಪರಿಹಾರ ಒದಗಿಸಿಕೊಡುವಲ್ಲಿ ಡಾ. ಹಮೀದ್ ರವರು ಯಶಸ್ವಿಯಾಗಿದ್ದಾರೆ ಮತ್ತು ಅವಿಶ್ರಾಂತವಾಗಿ ದುಡಿಯುತ್ತಿದ್ದಾರೆ.
ಹೀಗೆ, ಇನ್ನೂ ಹತ್ತು-ಹಲವಾರು ಸಾಮಾಜಿಕ ಮತ್ತು ಮಾನವೀಯ ಸೇವಾ ಕಾರ್ಯಗಳಲ್ಲಿ ತೊಡಗಿರುವ ಅವರನ್ನು, ಪ್ರಸ್ತುತ ಯೂನಿವರ್ಸಿಟಿ ಗುರುತಿಸಿ, ಅವರಿಗೆ ಪ್ರತಿಷ್ಠಿತ ಡಾಕ್ಟರೇಟ್ ಮತ್ತು ಡಾ. ಎಪಿಜೆ ಅಬ್ದುಲ್ ಕಲಾಂ ಶಾಂತಿ ಪ್ರಶಸ್ತಿಯನ್ನು ಕೊಡಮಾಡಿದೆ.
ಈ ಅವಳಿ ಪ್ರಶಸ್ತಿಗಳನ್ನು ಭಾಜನಮಾಡಿದ ಕೆಲವೇ ಬೆರಳೆಣಿಕೆಯ ಮಂದಿಗಳಲ್ಲಿ ಡಾ.ಪಿ.ಎ.ಹಮೀದ್ ರವರೂ ಒಬ್ಬರು.
ಪಡುಬಿದ್ರಿ ದಿವಂಗತ ಅರಬಿ ಅಬ್ದುಲ್ ಖಾದರ್ ಮತ್ತು ಆಯಿಶಾರವರ ಏಳು ಮಕ್ಕಳಲ್ಲಿ, ಡಾ. ಹಮೀದ್ ರವರು ಕಿರಿಯ ಮಗನಾಗಿರುತ್ತಾರೆ. ಇವರ ತಾಯಿಯವರು ಇತ್ತೀಚೆಗಷ್ಟೇ ನಿಧನಹೊಂದಿರುತ್ತಾರೆ. ಇವರ ಹಿರಿಯ ಸಹೋದರರಾದ ಪಿ.ಎ.ರಹಿಮಾನ್, ಪಿ.ಎ.ಹುಸೈನ್ ರವರು ಸಾಮುದಾಯಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರೆ, ಇನ್ನೋರ್ವ ಸಹೋದರ ಪಿ.ಎ.ಮೊಹಿದ್ದೀನ್ ರವರು ಗಡಿ ಭದ್ರತಾ ಪಡೆ (BSF) ಬೆಂಗಳೂರು ವಲಯದ Assistant Commandant (AC) ಆಗಿ ಸೇವೆಸಲ್ಲಿಸುತ್ತಿದ್ದಾರೆ.