Saturday, December 14, 2024
Homeಮನೋರಂಜನೆಗಾಸಿಪ್​ವಿಕ್ಕಿ ಕೌಶಲ್ - ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ: ಶುಭ ಹಾರೈಕೆಯ ಮಹಾಪೂರ

ವಿಕ್ಕಿ ಕೌಶಲ್ – ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ: ಶುಭ ಹಾರೈಕೆಯ ಮಹಾಪೂರ

ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದಾರೆ. ಈ ಜೋಡಿಗೆ ಎಲ್ಲ ಕಡೆಯಿಂದ ಶುಭಹಾರೈಕೆಯ ಮಹಾಪೂರವೇ ಹರಿದು ಬಂದಿದೆ.

ಮದುವೆ ಬಗ್ಗೆ ಇಷ್ಟು ದಿನ ತುಟಿ ಎರಡು ಮಾಡದ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ಯೂರಿಯಾಗಿ ಹಸೆಮಣೆ ಏರಿದ್ದಾರೆ.

ರಾಜಸ್ಥಾನದಲ್ಲಿ ಸಿಕ್ಸ್ ಸೆನ್ಸಸ್ ಹೆರಿಟೇಜ್ ಹೋಟೆಲ್‌ ಆಗಿ ಬದಲಾಗಿರುವ ಐತಿಹಾಸಿಕ ಬಾರ್ವಾರ ಕೋಟೆಯಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮದುವೆ ಜರುಗಿದೆ. ಮದುವೆಯ ಫೋಟೋಗಳು ಎಲ್ಲೂ ಲೀಕ್ ಆಗದಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ತಂಡ ತೀವ್ರ ಎಚ್ಚರಿಕೆ ವಹಿಸಿದ್ದರು. ಆದರೂ, ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಅವರ ಮದುವೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ.

ವರದಿಗಳ ಪ್ರಕಾರ, ತಮ್ಮ ಮದುವೆಯ ಪ್ರಸಾರ ಹಕ್ಕುಗಳನ್ನು ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಒಟಿಟಿ ಪ್ಲಾಟ್‌ಫಾರ್ಮ್‌ವೊಂದಕ್ಕೆ 80 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರಂತೆ. ಇದೇ ಕಾರಣದಿಂದ ವಿವಾಹ ಮಹೋತ್ಸವದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗದಂತೆ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಎಚ್ಚರ ವಹಿಸಿದ್ದರು ಎನ್ನಲಾಗಿದೆ. ಮದುವೆಗೆ ಬರುವ ಅತಿಥಿಗಳು ಕೂಡ ಫೋನ್ ಬಳಸದಂತೆ, ಫೋನ್ ಮೂಲಕ ಫೋಟೋಗಳನ್ನು ತೆಗೆಯದಂತೆ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಮನವಿ ಮಾಡಿದ್ದರು ಎಂದೂ ಸುದ್ದಿಯಾಗಿತ್ತು. ಇಷ್ಟೆಲ್ಲಾ ಇದ್ದರೂ, ಇದೀಗ ವಧು ವರ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ವಿಡಿಯೊ ಹಾಗೂ ಬಾಲ್ಕನಿಯಲ್ಲಿ ವಧು ಕತ್ರಿನಾ ಕೈಫ್ ಹಾಗೂ ವರ ವಿಕ್ಕಿ ಕೌಶಲ್ ನಿಂತಿರುವ ಫೋಟೋ ಹರಿದಾಡಿದೆ.

ಹೊಸ ಜೀವನಕ್ಕೆ ಅಡಿಯಿಟ್ಟಿರುವ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ದಂಪತಿಗೆ ಬಾಲಿವುಡ್ ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.