Saturday, December 14, 2024
Homeಉತ್ತರ ಕರ್ನಾಟಕವಿಜಯಪುರವಿಜಯಪುರಕ್ಕೆ ರಾಜ್ಯಪಾಲರ ಆಗಮನ

ವಿಜಯಪುರಕ್ಕೆ ರಾಜ್ಯಪಾಲರ ಆಗಮನ

ವಿಜಯಪುರ: ನವೆಂಬರ್ 9ರಂದು ನಡೆಯಲಿರುವ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ವಿಜಯಪುರ ನಗರಕ್ಕೆ ಸೋಮವಾರ ಆಗಮಿಸಿದರು.ಜಿಲ್ಲಾಧಿಕಾರಿ ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದ್ ಕುಮಾರ್ ಸ್ವಾಗತ ಕೋರಿದರು.ಬೆಂಗಳೂರಿನಿಂದ ವಿಮಾನದ ಮೂಲಕ ಕಲಬುರಗಿಗೆ ಆಗಮಿಸಿ ಅಲ್ಲಿಂದ ರಸ್ತೆ ಮಾರ್ಗವಾಗಿ ನೇರವಾಗಿ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ಆವರಣಕ್ಕೆ ಆಗಮಿಸಿದ ರಾಜ್ಯಪಾಲರಿಗೆ ಜಿಲ್ಲಾಡಳಿತ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್,ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ತುಳಸಿ ಮಾಲಾ ಅವರು ಪುಸ್ತಕ ಹಾಗೂ ಹೂಗುಚ್ಛ ನೀಡಿ ಬರಮಾಡಿಕೊಂಡರು .ಈ ಸಂದರ್ಭದಲ್ಲಿ ಕುಲ ಸಚಿವರಾದ ಆರ್.ಸುನಂದಮ್ಮ, ರಮೇಶ್ ಕೆ, ಉಪ ಕುಲಸಚಿವರಾದ ಗವಿಸಿದ್ದಪ್ಪ ಆನಂದಳ್ಳಿ ಹಾಗೂ ಸಿಬ್ಬಂದಿ ವಿಜಯ್ ಕುಮಾರ್ ಹಿರೇಮಠ ಉಪಸ್ಥಿತರಿದ್ದರು.