Saturday, December 14, 2024
Homeರಾಜ್ಯಉತ್ತರ ಕರ್ನಾಟಕವಿಜಯಪುರದಲ್ಲಿ ಮರ್ಯಾದಗೇಡು ಹತ್ಯೆ

ವಿಜಯಪುರದಲ್ಲಿ ಮರ್ಯಾದಗೇಡು ಹತ್ಯೆ

ವಿಜಯಪುರ: ಅನ್ಯಕೋಮಿನ ಯುವತಿ ಜೊತೆ ಪ್ರೀತಿ ಮಾಡುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಂದು ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ನಡೆದಿದೆ.

ಕಳೆದ ಮೂರ್ನಾಲ್ಕು ವರ್ಷದಿಂದ ಅನ್ಯಕೋಮಿನ ಯುವತಿ ಪ್ರೀತಿಸುತ್ತಿದ್ದ ಯುವಕ ರವಿ ನಿಂಬರಗಿ (32) ಕೊಲೆಯಾದ ಯುವಕ. 8 ದುಷ್ಕರ್ಮಿಗಳು ಸೇರಿ ಈ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ರವಿ ನಿಂಬರಗಿಯನ್ನು ಅಟ್ಟಾಡಿಸಿ ಹೊಡೆದು ಯುವತಿ ಮನೆಯವರು ಕೊಂದು ಹಾಕಿದ್ದಾರೆ. ಹತ್ಯೆ ಮಾಡಿ ಶವದ ಸಮೇತ ಆರೋಪಿಗಳು ನಾಪತ್ತೆಯಾಗಿದ್ದಾರೆ.