ಉಜಿರೆ: ಮುಂಡಾಜೆ ಗ್ರಾಮದ ದೇವಸ್ಯ ಎಂಬಲ್ಲಿ ಶುಕ್ರವಾರ ಸಂಜೆ ವಿದ್ಯುತ್ ತಂತಿ ಸ್ಪರ್ಶಿಸಿ ದನವೊಂದು ಮೃತಪಟ್ಟಿದೆ.
35 ಸಾವಿರ ರೂಪಾಯಿ ಮೌಲ್ಯದ ದನ, ಪ್ರತಿ ದಿನ 10 ಲೀಟರ್ ಹಾಲು ಕೊಡುತ್ತಿತ್ತು. ದನ ಕಳೆದುಕೊಂಡು ನಷ್ಟವಾಗಿದೆ ಎಂದು ದನದ ಮಾಲೀಕ ಕೆಂಪಯ್ಯ ಗೌಡ ಮೆಸ್ಕಾಂ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರದ ಭರವಸೆ ನೀಡಿದ್ದಾರೆ.