Monday, May 19, 2025
Homeಮಲೆನಾಡು ಕರ್ನಾಟಕಶಿವಮೊಗ್ಗವಿಸ್ಟಾಡೋಮ್: ಮೊದಲ ದಿನ 18 ಪ್ರಯಾಣಿಕರು

ವಿಸ್ಟಾಡೋಮ್: ಮೊದಲ ದಿನ 18 ಪ್ರಯಾಣಿಕರು

ಶಿವಮೊಗ್ಗ: ವಿಸ್ಟಾಡೋಮ್‌ ಬೋಗಿ ಅಳವಡಿಸಿದ ಇಂಟರ್‌ಸಿಟಿ ರೈಲು ಶನಿವಾರ ಯಶವಂತಪುರ–ಶಿವಮೊಗ್ಗ ಮಧ್ಯೆ ಸಂಚರಿಸಿತು.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ರೈಲ್ವೆ ಇಲಾಖೆ ರೈಲುಗಳಿಗೆ ಹವಾನಿಯಂತ್ರಿತ ವಿಸ್ಟಾಡೋಮ್‌ ಬೋಗಿಗಳನ್ನು ಅಳವಡಿಸುತ್ತಿದೆ. ಇಂಟರ್‌ಸಿಟಿ ರೈಲಿನಲ್ಲಿ 44 ಸೀಟುಗಳ ಒಂದು ಬೋಗಿ ಅಳವಡಿಸಲಾಗಿದೆ. ದೊಡ್ಡದಾದ ಗಾಜಿನ ಕಿಟಕಿಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಸೀಟನ್ನು 180 ಡಿಗ್ರಿಗೆ ತಿರುಗಿಸಿ ಕಿಟಕಿ ಕಡೆ ಮುಖ ಮಾಡಿ ಕುಳಿತುಕೊಂಡು ಪ್ರಕೃತಿ ಸೌಂದರ್ಯ ಸವಿಯಬಹುದು. ಮಾರ್ಗದಲ್ಲಿ ಸಿಗುವ ತಾಣಗಳನ್ನು ವೀಕ್ಷಿಸಬಹುದು.

ಯಶವಂತಪುರದಿಂದ ಶಿವಮೊಗ್ಗಕ್ಕೆ ₹ 1,130 ಪ್ರಯಾಣ ದರ ನಿಗದಿ ಮಾಡಲಾಗಿದೆ. ಮೊದಲ ದಿನ 18 ಪ್ರಯಾಣಿಕರು ಶಿವಮೊಗ್ಗಕ್ಕೆ ಬಂದಿಳಿದರು. 7 ಪ್ರಯಾಣಿಕರು ಬೆಂಗಳೂರಿನತ್ತ ಪಯಣ ಬೆಳೆಸಿದರು.