ನವದೆಹಲಿ: ಕ್ರಿಕೆಟಿಗ ರಾಹುಲ್ ತೆವಾಟಿಯ ರಿಧಿ ಪನ್ನು ಅವರನ್ನು ಮದುವೆಯಾಗುವ ಮೂಲಕ ಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
ರಾಹುಲ್ ತೆವಾಟಿಯ ಮದುವೆಯಲ್ಲಿ ಆರ್‌ಸಿಬಿ ಸ್ಪಿನ್ನರ್ ಯುಜವೇಂದ್ರ ಚಹಾಲ್, ಡೆಲ್ಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಮತ್ತು ಕೆಕೆಆರ್‌ನ ನಿತೀಶ್ ರಾಣಾ ಮತ್ತಿತರ ಕ್ರಿಕೆಟಿಗರು ಭಾಗವಹಿಸಿದ್ದರು.
ರಾಜಸ್ತಾನ್ ರಾಯಲ್ಸ್ ಆಲ್‌ರೌಂಡರ್ ತೆವಾಟಿಯ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.