Saturday, December 14, 2024
Homeಸುದ್ದಿರಾಷ್ಟ್ರೀಯಷೇರುಪೇಟೆಯಲ್ಲಿ ಮುಂದುವರಿದ ಜಿಗಿತ : ಸೆನ್ಸೆಕ್ಸ್ 383, ನಿಫ್ಟಿ 143 ಅಂಕ ಏರಿಕೆ

ಷೇರುಪೇಟೆಯಲ್ಲಿ ಮುಂದುವರಿದ ಜಿಗಿತ : ಸೆನ್ಸೆಕ್ಸ್ 383, ನಿಫ್ಟಿ 143 ಅಂಕ ಏರಿಕೆ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಧನಾತ್ಮಕ ವಹಿವಾಟು ಹಾಗೂ ಸ್ಥಳೀಯ ಕಂಪನಿಗಳ ಕಾರ್ಪೊರೇಟ್ ಫಲಿತಾಂಶದ ವರದಿಯು ಭಾರತೀಯ ಷೇರುಪೇಟೆ ಜಿಗಿತ ಕಾಣಲು ಕಾರಣವಾಯಿತು. ಮಾರುಕಟ್ಟೆ ಆರಂಭದಿಂದಲೇ ಏರಿಕೆ ಕಂಡು, ಮುಕ್ತಾಯದ ಹಂತದವರೆಗೂ ಸ್ಥಿರತೆಯನ್ನು ಕಾಯ್ದುಕೊಂಡಿತ್ತು.ಅಂತಿಮವಾಗಿ ಸಂವೇದಿ ಸೂಚ್ಯಂಕಗಳು ಧನಾತ್ಮಕವಾಗಿ ಕೊನೆಗೊಂಡಿವೆ.

ಇಂದು ರಿಯಾಲಿಟಿ (3.53%), ಮೀಡಿಯಾ (2.99%), ಮೆಟಲ್ಸ್ (2.40% ), ಆಟೋ (2.04% ) ವಲಯದ ಷೇರುಗಳು ಹೆಚ್ಚು ಏರಿಕೆ ಕಂಡಿತು. ಉಳಿದಂತೆ ಎಫ್ ಎಂ ಸಿ ಜಿ, ಫೈನಾನ್ಸ್, ಫಾರ್ಮಾ , ಸರಕಾರಿ ವಲಯದ ಷೇರುಗಳು ಸಹ ಏರಿಕೆಯಲ್ಲಿದ್ದವು. ಸತತ ಇಳಿಕೆಯ ಹಾದಿಯಲ್ಲಿದ್ದ ಐಟಿ ವಲಯದ ಕೆಲವು ಷೇರುಗಳು ಇಂದು ಏರಿಕೆಯಲ್ಲಿದ್ದವು. ಖಾಸಗಿ ವಲಯದ ಬ್ಯಾಂಕುಗಳು ಮಾತ್ರ ಅಲ್ಪ ಪ್ರಮಾಣದ ಇಳಿಕೆ ದಾಖಲಿಸಿತು.

ದಿನದ ಅಂತ್ಯಕ್ಕೆ ಸೆನ್ಸೆಕ್ಸ್‌ 383 ಅಂಕ, ನಿಫ್ಟಿ 143 ಅಂಕ ಏರಿಕೆ ಕಂಡಿದೆ.