Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಸದಸ್ಯತ್ವ ಶುಲ್ಕ ₹ 250ಕ್ಕೆ ಇಳಿಕೆ: ಮಹೇಶ್‌ ಜೋಶಿ

ಸದಸ್ಯತ್ವ ಶುಲ್ಕ ₹ 250ಕ್ಕೆ ಇಳಿಕೆ: ಮಹೇಶ್‌ ಜೋಶಿ

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್‌ ಸದಸ್ಯತ್ವ ಶುಲ್ಕವನ್ನು ₹ 250ಕ್ಕೆ ಇಳಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಕನ್ನಡ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನೆ ಮತ್ತು ಸೇವಾದೀಕ್ಷೆ ಸಮಾರಂಭದಲ್ಲಿ ಮಾತನಾಡಿದರು. ‘ಈಗ ಸದಸ್ಯತ್ವ ಶುಲ್ಕ ₹ 500 ಇದೆ, ಅದನ್ನು ಇಳಿಸಲಾಗುವುದು. ಪರಿಷತ್ತಿನಲ್ಲಿ 3.40 ಲಕ್ಷ ಸದಸ್ಯರು ಇದ್ದಾರೆ. ಐದು ವರ್ಷ ಅವಧಿಯಲ್ಲಿ ಈ ಸಂಖ್ಯೆಯನ್ನು ಒಂದು ಕೋಟಿಗೆ ಹೆಚ್ಚಿಸುವ ಗುರಿ ಇದೆ’ ಎಂದರು.

‘ಸೇನೆ, ಅರೆಸೇನೆಯಲ್ಲಿ ಸೇವೆ ಸಲ್ಲಿಸಿದವರು, ಅಂಗವಿಕಲರಿಗೆ ಉಚಿತವಾಗಿ ಸದಸ್ಯತ್ವ ನೀಡಲಾಗುವುದು. ಅವರ ಮನೆಗೇ ಹೋಗಿ ಸದಸ್ಯತ್ವ ನೀಡಲಾಗುವುದು. ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಸಹಿತ ಜಿಲ್ಲಾ, ತಾಲ್ಲೂಕು, ಹೋಬಳಿ ಹಂತಗಳಲ್ಲೂ ಒಬ್ಬರು ಒಮ್ಮೆ ಮಾತ್ರ ಅಧ್ಯಕ್ಷರಾಗಲು ಅವಕಾಶ ಎಂದು ಕಟ್ಟಳೆ ರೂಪಿಸಲಾಗುವುದು’ ಎಂದು ತಿಳಿಸಿದರು.