Saturday, December 14, 2024
Homeಕಲ್ಯಾಣ ಕರ್ನಾಟಕಕೊಪ್ಪಳಸರಳವಾಗಿ ನಡೆದ ಗವಿಮಠದ ಜಾತ್ರೆ 

ಸರಳವಾಗಿ ನಡೆದ ಗವಿಮಠದ ಜಾತ್ರೆ 

ಕೊಪ್ಪಳ: ಇಲ್ಲಿನ ಶ್ರೀ ಸಂಸ್ಥಾನ ಗವಿಮಠದ ಗವಿಸಿದ್ಧೇಶ್ವರ ರಥೋತ್ಸವ ನಸುಕಿನ ಜಾವ 4.15 ಕ್ಕೆ ಕೋವಿಡ್ ನಿಯಮದ ಅನುಸಾರ ಸೀಮಿತ ಭಕ್ತರ ಮಧ್ಯೆ ನಡೆಯಿತು.

ರಥವನ್ನು ಯಾವ ಸಮಯದಲ್ಲಿ ಎಳೆಯಬೇಕು ಎಂಬ ಸಮಯ ನಿರ್ಧಾರ ಮಾಡುವಲ್ಲಿ ಮಂಗಳವಾರ ತಡರಾತ್ರಿವರೆಗೂ ಯಾವುದೇ ಅಧಿಕೃತ ಹೇಳಿಕೆ ಹೊರಬೀಳಲಿಲ್ಲ.

ಹೆಚ್ಚಿನ ಸಂಖ್ಯೆಯ ಜನರು ಸೇರುವ ಭಯದಿಂದ ಮಠದ ಆಡಳಿತ ಮಂಡಳಿ ಕೊನೆಯ ಕ್ಷಣದಲ್ಲಿ ಘೋಷಣೆ ಮಾಡಿತು.

ನಿರ್ಭಂಧದ ನಡುವೆಯೂ ರಥೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು.

ಕೋವಿಡ್ ನಿಯಮ ಕಟ್ಟ ಪಾಲನೆ ಅಂಗವಾಗಿ ಪೊಲೀಸರು ಬಿಗಿಬಂದೋಬಸ್ತ್ ಮಾಡಿದ್ದರು.

ಮಧ್ಯರಾತ್ರಿಯೇ ಮಠದ ರಥದ ಮೈದಾನದಲ್ಲಿ ಜನರು ನೆರೆದಿದ್ದರು. ಬೆಳಿಗ್ಗೆ ಗವಿಸಿದ್ಧೇಶ್ವರನ ಗದ್ದುಗೆಗೆ ರುದ್ರಾಭಿಷೇಕ, ಪಲ್ಲಕ್ಕಿ ಮೆರವಣಿಗೆ, ಲಘು ರಥೋತ್ಸವ ನಡೆಯಿತು.

ಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಸಾಂಪ್ರದಾಯಿಕವಾಗಿ ತೇರು ಎಳೆಯಲಾಯಿತು.