Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುಸಾರಜನಕ ಘಟಕ; ಕಾಮಗಾರಿ ಬಹುತೇಕ ಪೂರ್ಣ

ಸಾರಜನಕ ಘಟಕ; ಕಾಮಗಾರಿ ಬಹುತೇಕ ಪೂರ್ಣ

ಚಿಕ್ಕಮಗಳೂರು: ನಗರದ ಪಶುಪಾಲನಾ ಮತ್ತು ಪಶು ವೈದ್ಯ ಇಲಾಖೆ ಉಪನಿರ್ದೇಶಕರ ಕಚೇರಿಯ ಆವರಣದಲ್ಲಿ ದ್ರವ ಸಾರಜನಕ ಘಟಕ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ.

ಸರ್ಕಾರ ಜಿಲ್ಲೆಗೊಂದು ಈ ಘಟಕ ಮಂಜೂರು ಮಾಡಿದೆ. ಘಟಕ ನಿರ್ಮಾಣದ ಅಂದಾಜು ವೆಚ್ಚ ₹ 24 ಲಕ್ಷ. ಈಗಾಗಲೇ ಕಟ್ಟೆ ನಿರ್ಮಿಸಿ ಉಪಕರಣಗಳನ್ನು ಅಳವಡಿಸಲಾಗಿದೆ.

ಘಟಕ ಮೂರು ಸಾವಿರ ಲೀಟರ್‌ ದ್ರವ ಸಾರಜನಕ ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೃತಕ ಗರ್ಭಧಾರಣೆಗೆ ಬಳಸುವ ನಳಿಕೆ ಸಂಗ್ರಹಿಸಿಡಲು ದ್ರವ ಸಾರಜನಕವನ್ನು ಬಳಸಲಾಗುತ್ತದೆ.

ಪ್ರಸ್ತುತ ಜಿಲ್ಲೆಗೆ ಹಾಸನದ ಕೆಎಂಎಫ್‌ನಿಂದ ದ್ರವ ಸಾರಜನಕ ಪೂರೈಕೆಯಾಗುತ್ತಿದೆ. ಲೀಟರ್‌ಗೆ ₹ 19 ದರ ಇತ್ತು. ಘಟಕ ಆರಂಭವಾದರೆ ₹ 12 ದರದಲ್ಲಿ ಲೀಟರ್‌ ಒದಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಜಿಲ್ಲೆಯಲ್ಲಿ 5.45 ಲಕ್ಷ ಜಾನುವಾರುಗಳು ಇವೆ. ಗರ್ಭಧಾರಣೆ ರಾಸುಗಳು (ಎಮ್ಮೆ, ಹಸು) ಸುಮಾರು 75 ಸಾವಿರ ಇವೆ. ಪಾಲಿಕ್ಲಿನಿಕ್‌–01, ಪಶು ಆಸ್ಪತ್ರೆ – 25, ಪಶು ಚಿಕಿತ್ಸಾಲಯ– 71 ಹಾಗೂ ಪ್ರಾಥಮಿಕ ಪಶು ಚಿಕಿತ್ಸಾಲಯ – 38 ಒಟ್ಟು 135 ಪಶುವೈದ್ಯ ಸಂಸ್ಥೆಗಳು ಇವೆ. ಇಲಾಖೆ ಅಂಕಿಅಂಶ ಪ್ರಕಾರ ಪ್ರತಿ ಕೇಂದ್ರದಲ್ಲಿ ತಿಂಗಳಿಗೆ ಸರಾಸರಿ 20ರಿಂದ 40 ಲೀಟರ್ ದ್ರವ ಸಾರಜನಕ ಬಳಕೆಯಾಗುತ್ತದೆ.