Saturday, December 14, 2024
Homeಸುದ್ದಿರಾಷ್ಟ್ರೀಯಸೇನಾ ಹೆಲಿಕಾಫ್ಟರ್‌ ಪತನ: 13 ಮಂದಿ ಸಾವು: ಒಬ್ಬರ ಸ್ಥಿತಿ ಗಂಭೀರ

ಸೇನಾ ಹೆಲಿಕಾಫ್ಟರ್‌ ಪತನ: 13 ಮಂದಿ ಸಾವು: ಒಬ್ಬರ ಸ್ಥಿತಿ ಗಂಭೀರ

ಚೆನ್ನೈ ರಕ್ಷಣಾ ಪಡೆಗಳ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಸಿಬ್ಬಂದಿ ಮತ್ತು ಕುಟುಂಬ ಸದಸ್ಯರು ಸಹಿತ 14 ಜನರನ್ನು ಹೊತ್ತ ಸೇನಾ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಪತನಗೊಂಡಿದೆ. 13 ಮಂದಿ ಮೃತಪಟ್ಟಿದ್ದಾರೆ.

ವೆಲ್ಲಿಂಗ್ಟನ್ ಸೇನಾ ಕಾಲೇಜಿನಲ್ಲಿ ನಡೆಯಲಿದ್ದ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಹೊಸದಿಲ್ಲಿಯಿಂದ ತಮಿಳುನಾಡಿನ ಸೂಲೂರಿಗೆ ವಿಶೇಷ ವಿಮಾನದಲ್ಲಿ ಬಂದಿದ್ದ ಈ ತಂಡವು ಸೂಲೂರಿನಿಂದ ಕೂನೂರಿಗೆ ಹೊರಟಿತ್ತು.

ಸೂಲೂರಿನ ಸೇನಾ ನೆಲೆಯಿಂದ ಮಿ-ಸಿರೀಸ್ ಹೆಲಿಕಾಪ್ಟರ್ ಈ ಅಪಘಾತ ಸಂಭವಿಸಿದೆ. ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ನೀಲಗಿರಿಯಲ್ಲಿ ಪತನಗೊಂಡಿದೆ. ಸಿಡಿಎಸ್ ಬಿಪಿನ್ ರಾವತ್ ಅವರ ಸಿಬ್ಬಂದಿ ಹಾಗೂ ಕುಟುಂಬ ಸದಸ್ಯರು ಅವರ ಜೊತೆಗೆ ಮಿ-ಸಿರೀಸ್ ಹೆಲಿಕಾಪ್ಟರ್ ನಲ್ಲಿದ್ದರು. ಅದು ತಮಿಳುನಾಡಿನ ಕೊಯಮತ್ತೂರು ಹಾಗೂ ಸೂಲೂರು ನಡುವೆ ಅಪಘಾತಕ್ಕೀಡಾಯಿತು.

ಭಾರತೀಯ ಸೇನೆಯ ಹೆಲಿಕಾಪ್ಟರ್ ಅಪಘಾತದ ಸ್ಥಳದಲ್ಲಿ ಬೃಹತ್ ಬೆಂಕಿ ಜ್ವಾಲೆ ಕಂಡುಬಂದಿದ್ದು, ತಕ್ಷಣದ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರು ಸಹಾಯ ಮಾಡುತ್ತಿದ್ದಾರೆ. ಹಲವು ತಂಡಗಳು ಸ್ಥಳದಲ್ಲಿದ್ದು ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಎಎನ್‌ಐ ವರದಿ ಮಾಡಿದೆ.