ಹುಬ್ಬಳ್ಳಿ: ಶಿರಡಿನಗರದ ಶುಭಂ ಎಂ. ಎಂಬಾತ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ, ಅವಳ ನಗ್ನ ವಿಡಿಯೊ ಚಿತ್ರಿಸಿಕೊಂಡು ಸ್ಟೇಟಸ್ ಹಾಕಿರುವ ಪ್ರಕರಣ ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ದಾಖಲಾಗಿದೆ.
ವಿದ್ಯಾರ್ಥಿನಿ ವ್ಯಾಸಂಗ ಮಾಡುತ್ತಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿದ್ದ ಶುಭಂ, ಯುವತಿಯ ವಾಟ್ಸ್‌ಆ್ಯಪ್ ನಂಬರ್ ಪಡೆದಿದ್ದ. ಮದುವೆಯಾಗುವುದಾಗಿ ನಂಬಿಸಿ ನಗ್ನ ಫೊಟೊ ಹಾಗೂ ವಿಡಿಯೊ ಮಾಡಿಸಿಕೊಂಡು ಅದರ ಸ್ಕ್ರೀನ್ ರೆಕಾರ್ಡ್ ತೆಗೆದುಕೊಂಡಿದ್ದ. ನಂತರ ಅದನ್ನು ಎಡಿಟ್ ಮಾಡಿ ವಾಟ್ಸ್‌ಆ್ಯಪ್ ಸ್ಟೇಟಸ್ ಇಟ್ಟು ಅವಮಾನಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.