Monday, May 19, 2025
Homeಮೈಸೂರು ವಿಭಾಗಮೈಸೂರುಹುಣಸೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿ ವ್ಯಕ್ತಿ ಸಾವು

ಹುಣಸೂರು ತಾಲ್ಲೂಕಿನಲ್ಲಿ ಕಾಡಾನೆ ದಾಳಿ ವ್ಯಕ್ತಿ ಸಾವು

ಮೈಸೂರು: ಜಿಲ್ಲೆಯ ಹುಣಸೂರು ತಾಲ್ಲೂಕಿನ
ಕೊಳವಿಗೆ ಗ್ರಾಮದ ನಿವಾಸಿ ರಾಜೇಶ್ (55) ಅವರು ಆನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಇವರು ಬುಧವಾರ ರಾತ್ರಿ ಮನೆ ಹಿತ್ತಿಲಿನಲ್ಲಿ ಹಸುವಿಗೆ ಹುಲ್ಲು ತರಲು ಹೋದ ಸಮಯದಲ್ಲಿ ಆನೆ ತುಳಿದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದರು. ಹುಲಿ ಯೋಜನಾ ನಿರ್ದೇಶಕರು ಬರಬೇಕು ಎಂದು ಸ್ಥಳಿಯರು ಪಟ್ಟು ಹಿಡಿದಿದ್ದಾರೆ.
ತಾಲ್ಲೂಕಿನ ನಾಗಾಪುರ ಪುನರ್ವಸತಿ ಕೇಂದ್ರದ 6 ನೇ ಬ್ಲಾಕ್ ನ ರಾಜು ಎಂಬುವವರ ಮನೆಯನ್ನು ಕಾಡಾನೆ ಜಖಂಗೊಳಿಸಿದೆ. ಬೆಳಿಗ್ಗೆ 6 ಗಂಟೆಗೆ ನುಗ್ಗಿದ ಕಾಡಾನೆ ಹಿಂಡು ಗಿರಿಜನರ ಬೆಳೆಯನ್ನು ದ್ವಂಸಗೊಳಿಸಿದೆ.