Saturday, December 14, 2024
Homeಮಲೆನಾಡು ಕರ್ನಾಟಕಕೊಡಗುಹುಲಿ ಹಲ್ಲು ಮಾರಾಟ ಯತ್ನ: ನಾಲ್ವರ ಬಂಧನ

ಹುಲಿ ಹಲ್ಲು ಮಾರಾಟ ಯತ್ನ: ನಾಲ್ವರ ಬಂಧನ

ಕೊಡಗು: ಹುಲಿ ಹಲ್ಲು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ವಿರಾಜಪೇಟೆ ತಾಲ್ಲೂಕು ಅರಣ್ಯ ಸಂಚಾರಿ ದಳ ಬಂಧಿಸಿದೆ.

ಪೊನ್ನಂಪೇಟೆ ತಾಲ್ಲೂಕು ಸುಳುಗೋಡಿನ ವೈ.ಸಿ.ಗಣೇಶ, ಎಚ್.ಆರ್.ಕುಮಾರ, ಕೋತೋರಿನ ಕೆ.ವಿ.ಸಂತೊಷ್, ಚಿಕ್ಕಮಂಡೂರಿನ ಪೆಮ್ಮಂಡ ಪವನ್ ಬಂಧಿತರು.

ಗೋಣಿಕೊಪ್ಪಲು ಬಳಿಯ ಚೆನ್ನಂಗೊಲ್ಲಿ ಬಸ್‌ ನಿಲ್ದಾಣದಲ್ಲಿ ಆರೋಪಿಗಳು ಮಧ್ಯವರ್ತಿಗಳಿಗೆ ಹುಲಿ ಹಲ್ಲು ಮಾರಾಟಕ್ಕೆ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ, ಕೃತ್ಯಕ್ಕೆ ಬಳಸಿದ್ದ 2 ಬೈಕ್, 6 ಹುಲಿ ಹಲ್ಲು ವಶಕ್ಕೆ ಪಡೆದರು. ಆರೋಪಿಗಳಿಗೆ ಪೊನ್ನಂಪೇಟೆ ನ್ಯಾಯಾಲಯವು 15 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಅರಣ್ಯ ಸಂಚಾರಿ ದಳದ ಸಬ್‌ಇನ್‌ಸ್ಪೆಕ್ಟರ್‌ ವೀಣಾನಾಯಕ್, ತಿತಿಮತಿಯ ಎಸಿಎಫ್ ಪಿ.ಪಿ.ಉತ್ತಯ್ಯ, ಆರ್‌ಎಫ್‌ಒ ಅಶೋಕ್ ಪಿ.ಹುನುಗುಂದ, ಡಿಆರ್‌ಎಫ್‌ಒ ಎ.ಎಸ್.ಉಮಾಶಂಕರ್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.