ಹೊಸನಗರ: ಬೈಂದೂರು ಶಿರೂರಿಗೆ ಹೊರಟಿದ್ದ ಅಲೆಮಾರಿ ಕುಟುಂಬವೊಂದು ಸರ್ಕಾರಿ ಬಸ್ಸು ಹತ್ತಿದ್ದರು.
ಬಸ್ಸಿನ ಕಂಡಕ್ಟರ್ ಬಂದು ಎಲ್ಲಿಗೆ ಎಂದು ಕೇಳಿದಾಗ ಶಿರೂರು ಹೋಗಬೇಕ್ರಿ ಮೂರು ಟಿಕೇಟ್ ಕೊಡ್ರಿ ಅಂದ. ಆಗ ಒಂದು ಪುಟ್ಟ ಚೀಲದಿಂದ ಚಿವ್ ಚಿವ್ ಶಬ್ಧ ಬರುತ್ತಿದ್ದನ್ನು ಆಲಿಸಿದ ಕಂಡಕ್ಟರ್ ಅದು ಏನು ಎಂದು ಪ್ರಶ್ನಿಸಿದೆ. ಅದು ಒಂದು ಕೋಳಿ ಮರೀರಿ.. ಅಂದ. ಕೂಡಲೇ ಕಂಡಕ್ಟರ್ ಅದಕ್ಕು ಟಿಕೇಟ್ ಮಾಡ ಬೇಕು. ಅದಕ್ಕು ರೂಲ್ಸ್ ಇದೆ ಎಂದು ಅರ್ಧ ಚಾರ್ಜ್ ಮಾಡಿ ಟಿಕೇಟ್ ಕೊಟ್ಟಿದ್ದಾನೆ. ಅದು ಬರೋಬ್ಬರಿ ರೂ.52. ಮುಖಮುಖ ನೋಡಿಕೊಂಡ ಆ ಮೂವರು ಬೇರೆದಾರಿ ಕಾಣದೆ ಟಿಕೇಟ್ ತಗೆದುಕೊಂಡರು.
ಶಿರಸಿ ಸಿದ್ದಾಪುರದಿಂದ ಬಂದ ಆ ಕುಟುಂಬ ರೂ.10 ಕೊಟ್ಟು ಕೋಳಿ ಮರಿ ತಂದಿದ್ದರು. ಬಸ್ಸಿನ ಟಿಕೇಟ್ ದರ ನೋಡಿ ಮೂಗಿಗಿಂತ ಮೂಗುತಿ ಭಾರ ಅಂದಂಗಾಯ್ತು ಎಂದು ಗೊಣಗಿಕೊಂಡರು.
ಈ ಇಡೀ ದೃಶ್ಯ ಬಸ್ಸಿನಲ್ಲಿದ್ದರ ಕುತೂಹಲ ಮತ್ತು ಚರ್ಚೆಗೂ ಗ್ರಾಸವಾಯ್ತು.