Saturday, December 14, 2024
Homeಸುದ್ದಿರಾಷ್ಟ್ರೀಯ11 ಅಧಿಕಾರಿಗಳ ಮೃತದೇಹ ಗುರುತು ಪತ್ತೆ: ಇನ್ನಿಬ್ಬರ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ

11 ಅಧಿಕಾರಿಗಳ ಮೃತದೇಹ ಗುರುತು ಪತ್ತೆ: ಇನ್ನಿಬ್ಬರ ಗುರುತು ಪತ್ತೆಗೆ ಡಿಎನ್ ಎ ಪರೀಕ್ಷೆ

ಹೊಸದಿಲ್ಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕುನ್ನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರಲ್ಲಿ ಇಲ್ಲಿವರೆಗೆ 11 ಮಂದಿಯ ಗುರುತು ಪತ್ತೆಯಾಗಿದೆ. ಇಬ್ಬರ ಗುರುತು ಪತ್ತೆ ಕಾರ್ಯ ಆಗಬೇಕಿದ್ದು ಮೃತದೇಹಗಳ ಡಿಎನ್ ಎ ಪರೀಕ್ಷೆಗೆ ಕಳುಹಿಸಲಾಗಿದೆ.

ಹೆಲಿಕಾಫ್ರು್‌ ಪತನವಾದ ಮೇಲೆ 7 ಮಂದಿಯ ಗುರುತು ಪತ್ತೆಯಾಗಿತ್ತು. ಇದೀಗ ಮತ್ತೆ ನಾಲ್ವರ ಗುರುತು ಪತ್ತೆಯಾಗಿದೆ. ಪತ್ತೆ ಹಚ್ಚಿದ ಮೃತಪಟ್ಟ ವಾಯುಪಡೆ ಅಧಿಕಾರಿಗಳನ್ನು ಜೆಡಬ್ಲ್ಯುಒ ಪ್ರದೀಪ್ ಎ, ವಿಂಗ್ ಕಮಾಂಡರ್ ಪಿ ಎಸ್ ಚೌಹಾನ್, ಜೆಡಬ್ಲ್ಯುಒ ರಾಣಾ ಪ್ರತಾಪ್ ದಾಸ್ ಮತ್ತು ಸ್ಕ್ರ್ವಾಡ್ರ್ ಲೀಡರ್ ಕುಲದೀಪ್ ಸಿಂಗ್ ಎಂದು ಗುರುತಿಸಲಾಗಿದೆ.

ಈ ದುರಂತದಲ್ಲಿ ರಕ್ಷಣಾ ಪಡೆ ಮೊದಲ ಮುಖ್ಯಸ್ಥ (ಸಿಡಿಎಸ್‌) ಬಿಪಿನ್‌ ರಾವತ್‌, ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಮೃತಪಟ್ಟಿದ್ದರು.