ಕೊಚ್ಚಿ: ಆರನೇನೇ ತರಗತಿವರೆಗೆ ವ್ಯಾಸಂಗ ಮಾಡಿ ಮದುವೆಯಾಗಿ. 12ನೇ ವಯಸ್ಸಿಗೇ ವಿದ್ಯಾಭ್ಯಾಸ ನಿಲ್ಲಿಸಿದ್ದ ಮಹಿಳೆ ಈಗ ಶಿಕ್ಷಕಿಯಾಗಿ ಅಚ್ಚರಿ ಮೂಡಿಸಿದ್ದಾರೆ.
ಮದುವೆ ನಂತರ ಶಿಕ್ಷಣ ಮುಂದುವರಿದಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರ 4 ಮಕ್ಕಳ ತಾಯಿಯಾದ ನಂತರ ಮನೆಯ ಉಸ್ತುವಾರಿ ಮತ್ತು ಮಕ್ಕಳ ಲಾಲನೆಪಾಲನೆಯಲ್ಲಿಯೇ ಅವರ ಜೀವನ ಕಳೆದುಹೋಯಿತು.
ಅಕೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪಾಸು ಮಾಡಿದ್ದು 26ನೇ ವಯಸ್ಸಿನಲ್ಲಿ ಎನ್ನುವುದು ಅಚ್ಚರಿಯ ಸಂಗತಿ. ಮನೆಗೆ ಬಂದಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಯೋರ್ವರು 18 ದಾಟಿದ ಯಾರು ಬೇಕಾದರೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬಹುದು ಎನ್ನುವ ಮಾಹಿತಿ ತಿಳಿಸಿದರು. ರಾಮ್ಲಾ ಅವರ ಓದಿನ ಆಸೆ ಚಿಗುರಲು ಅ ಸಿಬ್ಬಂದಿ ಕಾರಣರಾದರು.
ಮಕ್ಕಳ ಲಾಲನೆ ಪಾಲನೆ ನಡುವೆಯೇ ಓದಿಗೆ ಸಮಯ ಮೀಸಲಿಟ್ಟರು. ಅದೀಗ ಫಲ ನೀಡಿದೆ. ಈಗ ರಾಮ್ಲಾ ಅವರಿಗೆ 45 ವರ್ಷ ವಯಸ್ಸು. ಅರೇಬಿಕ್ ಭಾಷೆಯಲ್ಲಿ ಅವರು ಮಾಸ್ಟರ್ಸ್ ಪದವಿ ಪಡೆದಿದ್ದಾರೆ.
ರಾಜ್ಯ ಸರ್ಕಾರಿ ಶಿಕ್ಷಕರ ನೇಮಕಾತಿಗೆ ನಡೆಸಲಾಗುವ ಅರ್ಹತಾ ಪರೀಕ್ಷೆಯನ್ನು ರಾಮ್ಲಾ ಪಾಸು ಮಾಡಿದ್ದಾರೆ. ಇಂದು ರಾಮ್ಲಾ ಅವರು ತಮ್ಮ ಓದುವ ಕನಸನ್ನು ಮಾತ್ರವೇ ನನಸು ಮಾಡಿಕೊಂಡಿಲ್ಲ, ನಾದಪುರಂನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.