Monday, May 19, 2025
Homeಕ್ರೀಡೆ2021ರ ವಿಶ್ವಕಪ್‌ನಲ್ಲಿ ಜೋಸ್‌ ಬಟ್ಲರ್‌ ಮೊದಲ ಶತಕ

2021ರ ವಿಶ್ವಕಪ್‌ನಲ್ಲಿ ಜೋಸ್‌ ಬಟ್ಲರ್‌ ಮೊದಲ ಶತಕ

ದುಬೈ: ಈ ಬಾರಿ ಟ್ವೆಂಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಜೋಶ್‌ ಬಟ್ಲರ್‌ ಅಜೇಯ ಶತಕ (101) ಬಾರಿಸಿ ಇಂಗ್ಲೆಂಡ್‌ ಅನ್ನು ಸೆಮಿಫೈನಲ್‌ಗೆ ಕೊಂಡೊಯ್ದಿದ್ದಾರೆ. ಇದು ಈ ಬಾರಿಯ ವಿಶ್ವಕಪ್‌ನಲ್ಲಿ ದಾಖಲಾದ ಮೊದಲ ಶತಕ. ಹಾಗೆಯೇ ಸೆಮಿಫೈನಲ್‌ಗೆ ತಲುಪಿದ ಮೊದಲ ತಂಡವೂ ಇಂಗ್ಲೆಂಡ್‌ ಆಗಿದೆ.

ಮೊದಲ 10 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ ಕೇವಲ 47 ರನ್‌ ಗಳಿಸಿ ಪರದಾಡುತ್ತಿದ್ದ ಇಂಗ್ಲೆಂಡ್‌ಗೆ ನಾಯಕ ಇಯಾನ್‌ ಮಾರ್ಗನ್‌ (40) ಜತೆ ಸೇರಿ ಶತಕದ (112) ಜತೆಯಾಟ ನೀಡಿದರು. ಇದರಿಂದ ತಂಡವು 163 ರನ್‌ಗಳಿಸಿತು. ಇದನ್ನು ಬೆಂಬತ್ತಿದ ಶ್ರೀಲಂಕಾ ಆರಂಭದ ಕುಸಿತದ ನಂತ ಚೇತರಿಸಿಕೊಂಡು ಗೆಲುವಿನತ್ತ ನಾಗಲೋಟವಿಟ್ಟಿತ್ತು. ಆದರೆ 17ನೇ ಓವರ್‌ನಲ್ಲಿ ಇಬ್ಬರು ಹಸರಂಗ ಮತ್ತು ಶನಕ ಇಬ್ಬರು ಇಂಗ್ಲೆಂಡ್‌ನ ಅದ್ಭುತ ಫೀಲ್ಡಿಂಗ್‌ಗೆ ಬಲಿಯಾಗುವ ಮೂಲಕ ಕೊನೇ ಹಂತದಲ್ಲಿ ಮತ್ತೆ ಕುಸಿತ ಕಂಡು 26 ರನ್‌ಗಳಿಂದ ಸೋಲೊಪ್ಪಿಕೊಂಡಿತು.