Saturday, December 14, 2024
Homeಉತ್ತರ ಕರ್ನಾಟಕಬಾಗಲಕೋಟೆರಾಜ್ಯೋತ್ಸವದಲ್ಲಿ ಸಸಿ ನೆಡಲು ಗುಂಡಿ ಅಗೆದ ವೇಳೆ ಮೂರ್ತಿ ಪತ್ತೆ

ರಾಜ್ಯೋತ್ಸವದಲ್ಲಿ ಸಸಿ ನೆಡಲು ಗುಂಡಿ ಅಗೆದ ವೇಳೆ ಮೂರ್ತಿ ಪತ್ತೆ

ಬಾಗಲಕೋಟೆ: ಕೆರೂರ ಪಟ್ಟಣದ ಹೊರವಲಯದ ಸರ್ವೇಶ್ವರ ಕೊಳ್ಳದ ಮೇಲಿನ ಅರಣ್ಯ ಪ್ರದೇಶದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ಸೋಮವಾರ ಸಸಿ ನೆಡಲು ಜೆಸಿಬಿ ಯಂತ್ರದಿಂದ ಗುಂಡಿ ತೆಗೆಯುತ್ತಿದ್ದ ಸಂದರ್ಭದಲ್ಲಿ ಗಾಳಿ ಆಂಜನೇಯ ಮೂರ್ತಿಯ ಶಿಲೆಯೊಂದು ಪತ್ತೆಯಾಗಿದೆ.

ಸರ್ವೇಶ್ವರ ಕೊಳ್ಳದ ಕಾಲೊನಿ ನಿವಾಸಿಗಳು ಪತ್ತೆಯಾದ ಆಂಜನೇಯ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ವಾರ್ಡ್ ಸದಸ್ಯ ಪ್ರಮೋದ ಪೂಜಾರ ಅವರ ನೇತೃತ್ವದಲ್ಲಿ ಸಸಿ ನೆಡಲು ಜೆಸಿಬಿ ಮೂಲಕ ತಗ್ಗು ಅಗೆಯುವ ಸಂದರ್ಭದಲ್ಲಿ ಆಂಜನೇಯ ಕೆತ್ತನೆ ಕಲ್ಲು ಪತ್ತೆಯಾಗಿದೆ.

ಕೆಲವು ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ಹಳೆಯ ಕಾಲದ ಸ್ವಾಮೀಜಿಯೊಬ್ಬರು ಪೂಜೆ, ಧಾರ್ಮಿಕ ಆಚರಣೆಗಳನ್ನು ನೆರವೇರಿಸುತ್ತಿದ್ದರು ಎಂದು ಇಲ್ಲಿಯ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ.