ಮೈಸೂರು: ಇಲ್ಲಿನ ವಿಜಯನಗರದ 2ನೇ ಹಂತದ ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಅಪರಾಧ ಪತ್ತೆ ವಿಭಾಗದ ಪೊಲೀಸರು ಇಬ್ಬರನ್ನು ಬಂಧಿಸಿ, ನೇಪಾಳದ ಮಹಿಳೆಯೊಬ್ಬರನ್ನು ರಕ್ಷಿಸಿದ್ದಾರೆ.
4 ಮೊಬೈಲ್ ಫೋನ್‌ಗಳು ಹಾಗೂ ₹ 18,500 ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಮಹಿಳಾ ಪುನರ್ವಸತಿ ಕೇಂದ್ರವೊಂದರಲ್ಲಿ ಸಂತ್ರಸ್ತ ಮಹಿಳೆಯನ್ನಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ಎಎಸ್‌ಐ ರಾಜು, ಸಿಬ್ಬಂದಿ ರಾಧೇಶ್, ಜನಾರ್ದನ್‌ರಾವ್, ರಾಮಯ್ಯ, ಪುರುಷೋತ್ತಮ್, ಸುನಿಲ್, ಮಮತಾ, ಶ್ರೀನಿವಾಸ್ ಕಾರ್ಯಾಚರಣೆ ತಂಡದಲ್ಲಿದ್ದರು.