Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆಈಜಲು ತೆರಳಿದ್ದ ಮೂವರು ಬಾಲಕರ ಸಾವು

ಈಜಲು ತೆರಳಿದ್ದ ಮೂವರು ಬಾಲಕರ ಸಾವು

ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಜಗಳೂರು: ಇಲ್ಲಿನ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಸಹೋದರರು ಸೇರಿ ಮೂವರು ಬಾಲಕರು ಶನಿವಾರ ಮೃತಪಟ್ಟಿದ್ದಾರೆ.

ತಾಲ್ಲೂಕಿನ ಸಂತೆಮುದ್ದಾಪುರ ಮೂಲದವರಾದ ಪಟ್ಟಣದ ನಿವಾಸಿ ಶೇಖಾವತ್ ಅವರ ಪುತ್ರರಾದ ಆಶಿಕ್ (10), ಅಫ್ರಾನ್‌ (8) ಹಾಗೂ ಅಬ್ದುಲ್ ಅವರ ಪುತ್ರ ಸೈಯದ್ ಫೈಜಾನ್ (9) ಮೃತಪಟ್ಟ ಬಾಲಕರು.

ರಾತ್ರಿಯಾದರೂ ಬಾಲಕರು ಮನೆಗೆ ಬಾರದಿರುವುದರಿಂದ ಪೋಷಕರು ಹುಡುಕಾಡಿದ್ದಾರೆ. ಸಮೀಪದ ಕೆರೆಯ ಬಳಿ ಹೋಗಿ ನೋಡಿದಾಗ ಬಾಲಕರು ಮುಳುಗಿ ಸಾವನ್ನಪ್ಪಿರುವುದು ಗೊತ್ತಾಗಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ತಡರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿ ಬಾಲಕರ ಮೃತದೇಹಗಳನ್ನು ಹೊರ ತೆಗೆದಿದ್ದಾರೆ.

ಜಗಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.