Saturday, December 14, 2024
Homeಕ್ರೀಡೆಫುಟ್‌ಬಾಲ್‌: ಬೆಂಗಳೂರು ಇಂಡಿಪೆಂಡೆಂಟ್ಸ್‌ಗೆ ಜಯ

ಫುಟ್‌ಬಾಲ್‌: ಬೆಂಗಳೂರು ಇಂಡಿಪೆಂಡೆಂಟ್ಸ್‌ಗೆ ಜಯ

ಬೆಂಗಳೂರು: ಎದುರಾಳಿ ಆಟಗಾರ ನೀಡಿದ ಉಡುಗೊರೆ ಗೋಲಿನ ನೆರವಿನಿಂದ ಬೆಂಗಳೂರು ಇಂಡಿಪೆಂಡೆಂಟ್ಸ್ ತಂಡವು ಬಿಡಿಎಫ್‌ಎ ಸೂಪರ್ ಡಿವಿಷನ್ ಫುಟ್‌ಬಾಲ್ ಟೂರ್ನಿಯಲ್ಲಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ‍ಂದ್ಯದಲ್ಲಿ 1–0ಯಿಂದ ಬೆಂಗಳೂರು ಡ್ರೀಮ್‌ ಯುನೈಟೆಡ್ ಎಫ್‌ಸಿ ತಂಡವನ್ನು ಮಣಿಸಿತು. ಡ್ರೀಮ್‌ ಯುನೈಟೆಡ್‌ನ ಆರ್‌. ಸುಹಾಸ್ 50ನೇ ನಿಮಿಷದಲ್ಲಿ ಎದುರಾಳಿ ತಂಡದ ಗೋಲುಪೆಟ್ಟಿಗೆಗೆ ಚೆಂಡು ಸೇರಿಸಿದರು.

ಬುಧವಾರ ನಡೆಯುವ ಪಂದ್ಯಗಳಲ್ಲಿ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ–ಬಿಯುಎಫ್‌ಸಿ ನಡುವೆ ಪಂದ್ಯ ನಡೆಯಲಿದೆ.