Monday, May 19, 2025
Homeಕರಾವಳಿ ಕರ್ನಾಟಕಉತ್ತರ ಕನ್ನಡಅಕಾಲಿಕ ಮಳೆಗೆ ಬೆಳೆ ಹಾನಿ:ರೈತ ಆತ್ಮಹತ್ಯೆ

ಅಕಾಲಿಕ ಮಳೆಗೆ ಬೆಳೆ ಹಾನಿ:ರೈತ ಆತ್ಮಹತ್ಯೆ

ಶಿರಸಿ: ಅಕಾಲಿಕ ಮಳೆಯಿಂದ ಫಸಲು ನಾಶವಾಗಿದ್ದಕ್ಕೆ ಬೇಸರಗೊಂಡ ತಾಲ್ಲೂಕಿನ ನರೂರು ಗ್ರಾಮದ ರೈತರೊಬ್ಬರು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಂಗಾಧರ ಫಕೀರಣ್ಣ ಶೇಷಣ್ಣನವರ (58) ಆತ್ಮಹತ್ಯೆ ಮಾಡಿಕೊಂಡ ರೈತ. ‘ಮಳೆಯಿಂದ ಭತ್ತ, ಶುಂಠಿ ಬೆಳೆ ಹಾನಿಯಾಗಿದ್ದಕ್ಕೆ ಬೇಸರಗೊಂಡಿದ್ದರು. ನ.17 ರಂದು ಕೀಟನಾಶಕ ಸೇವಿಸಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ನ.19 ರಂದು ಮೃತಪಟ್ಟಿದ್ದಾರೆ’ ಎಂದು ಬನವಾಸಿ ಠಾಣೆ ಪೊಲೀಸರು ತಿಳಿಸಿದ್ದಾರೆ.