Monday, May 19, 2025
Homeಕಲ್ಯಾಣ ಕರ್ನಾಟಕರಾಯಚೂರುಹಳ್ಳಕ್ಕೆ ಮಗುಚಿ ಬಿದ್ದ ಲಾರಿ: ಭತ್ತ ನೀರುಪಾಲು

ಹಳ್ಳಕ್ಕೆ ಮಗುಚಿ ಬಿದ್ದ ಲಾರಿ: ಭತ್ತ ನೀರುಪಾಲು

ರಾಯಚೂರು: ಸಿರವಾರ ತಾಲ್ಲೂಕಿನ ಮಲ್ಲನಗುಡ್ಡ ಕ್ಯಾಂಪ್‌ ರೈತ ಪಾಪಾರಾವ್‌ ಅವರಿಗೆ ಸೇರಿದ ಭತ್ತದ ಚೀಲಗಳನ್ನು ಸಾಗಿಸುತ್ತಿದ್ದ ಲಾರಿಯು ಸೊಸೈಟಿ ಕ್ಯಾಂಪ್‌ ಬಳಿ ಭಾನುವಾರ ಮಗುಚಿದ್ದು, ಭತ್ತದ ಚೀಲಗಳು ನೀರುಪಾಲಾಗಿವೆ.

ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದ ಸೇತುವೆ ಮೇಲೆ ನೀರು ಹರಿದುಹೋಗಿದೆ. ಲಾರಿ ಸಂಚರಿಸುವಾಗ ಸೇತುವೆ ಕುಸಿದಿರುವುದು ಲಾರಿ ಮಗುಚುವುದಕ್ಕೆ ಕಾರಣ. 350 ಕ್ಕೂ ಹೆಚ್ಚು ಭತ್ತದ ಚೀಲಗಳು ಲಾರಿಯಲ್ಲಿದ್ದವು. 100 ಕ್ಕೂ ಹೆಚ್ಚು ಚೀಲಗಳು ನೀರಿನಲ್ಲಿ ಕೊಚ್ಚಿಹೋಗಿವೆ.