Saturday, December 14, 2024
Homeಕಲ್ಯಾಣ ಕರ್ನಾಟಕರಾಯಚೂರುಮತ್ತೆ ಮಳೆ: ಭತ್ತ‌ ಬೆಳೆ ಎಲ್ಲವೂ ನೀರುಪಾಲು

ಮತ್ತೆ ಮಳೆ: ಭತ್ತ‌ ಬೆಳೆ ಎಲ್ಲವೂ ನೀರುಪಾಲು

ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಹೋಬಳಿಯಲ್ಲಿ ಮಂಗಳವಾರ ರಾತ್ರಿ ಆಲಿಕಲ್ಲು ಮಳೆ‌ ಸುರಿದಿದ್ದು, ಭತ್ತದ ಬೆಳೆ ಎಲ್ಲವೂ ನೀರುಪಾಲಾಗಿದೆ.

ಮ್ಯಾಕಲ್ ದೊಡ್ಡಿ, ಮೇದಿನಾಪುರ, ಗಲಗ ಹಾ ಕ‌ರಡಿಗುಡ್ಡ ಸೇರಿದಂತೆ ಹಲವು ಗ್ರಾಮಗಳಲ್ಲಿ ಕಷ್ಟಪಟ್ಟು ಬೆಳೆದಿದ್ದ ಭತ್ತದ ಗದ್ದೆಗಳ ಎದುರು ರೈತರು ಅಸಹಾಯಕರಾಗಿ ಸಂಕಷ್ಟ ವ್ಯಕ್ತಪಡಿಸುತ್ತಿದ್ದಾರೆ.

‘ಒಂದು ಎಕರೆಗೆ ₹25 ಸಾವಿರ‌ ಖರ್ಚು ಮಾಡಿ 3.5 ಎಕರೆ ಭತ್ತ ಬೆಳೆದಿರುವುದು ಮಳೆಯಿಂದ ಸಂಪೂರ್ಣ ‌ನೆಲಕ್ಕೆ‌ ಮಲಗಿದೆ. ಸರ್ಕಾರವು ಪ್ರತಿ ಎಕರೆಗೆ ₹40 ಸಾವಿರ ಪರಿಹಾರ ನೀಡಿ ರೈತರು ಬದುಕುತ್ತಾರೆ’ ಎಂದು ಜಾಲಹಳ್ಳಿ ರೈತ ಮಲ್ಲಿಕ್ ಅಹ್ಮದ್ ಅಳಲು ತೋಡಿಕೊಂಡರು.