ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜು ರವರು ಚಿತ್ರದುರ್ಗ ದಾವಣಗೆರೆ ವಿಧಾನ ಪರಿಷತ್ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಸ್ಥಳೀಯ ಗಂಡಸರು ಯಾರೂ ಇಲ್ಲವೇ ಎಂದು ನೀಡಿರುವ ಹೇಳಿಕೆ ತೀರಾ ಬಾಲಿಶವಾಗಿದ್ದು, ಇಂತಹ ರಾಜಕಾರಣಿಗಳು ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವುದು ನಮ್ಮ ಜಿಲ್ಲೆಯ ದೌರ್ಭಾಗ್ಯ ಎಂದರೆ ತಪ್ಪಾಗಲಾರದು.
ರಾಜಕೀಯದಲ್ಲಿ ವಿರೋಧ ಪಕ್ಷಗಳ ಬಗ್ಗೆ ಮಾತನಾಡುವುದು, ವಿರೋಧ ಮಾಡುವುದು ಸಾಮಾನ್ಯ ಆದರೆ ಅವರು ಬಳಸುವ ಭಾಷೆ ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂಬುದು ಮಾತ್ರ ಸತ್ಯ.
ಬೈರತಿ ಬಸವರಾಜ್ ರವರೇ ನಮ್ಮ ಜಿಲ್ಲೆಯ ರಾಜಕಾರಣಿಗಳು ತೀರ ನಿಮ್ಮ ಮಟ್ಟದ ಪದ ಬಳಕೆ ಮಾಡುವುದಿಲ್ಲ , ಈ ರೀತಿಯ ಭಾಷೆಯ ಪದ ಬಳಕೆ ನಿಮಗೆ ಮಾತ್ರ ಸೀಮಿತವಾಗಲಿ.ರಾಜಕಾರಣದಲ್ಲಿ ಅನುಭವಿಗಳ ಆಗಿರುವ ನಿಮಗೆ ನಮ್ಮ ಜಿಲ್ಲೆಯ ಬಗ್ಗೆ ಮಾಹಿತಿ ಇಲ್ಲ ಎನಿಸುತ್ತದೆ, ನಿಮ್ಮ ಪಕ್ಷದ ಇಂದಿನ ಲೋಕಸಭಾ ಸದಸ್ಯರು, ಅವರಿಗಿಂತ ಮುಂಚೆ ಲೋಕಸಭಾ ಸದಸ್ಯರಾಗಿದ್ದ ಅಂತಹ ಅವರ ತಂದೆಯವರು ಸಹ ಪಕ್ಕದ ಜಿಲ್ಲೆಯವರೇ…
ಇನ್ನು ಜಿಲ್ಲೆಯಲ್ಲಿ ಐದು ಜನ ಬಿಜೆಪಿ ಶಾಸಕರಿದ್ದರೂ ಸಹ ಬೇರೆ ಜಿಲ್ಲೆಯ ನಿಮ್ಮನ್ನು ದಾವಣಗೆರೆ ಜಿಲ್ಲೆಯ ಉಸ್ತುವಾರಿಗಳನ್ನಾಗಿ ಮಾಡಿದ್ದಾರೆ.ಇದರ ಅರ್ಥ ಲೋಕಸಭಾ ಸದಸ್ಯರಾಗಲೂ, ಜಿಲ್ಲೆಯ ಉಸ್ತುವಾರಿ ಸಚಿವರಾಗಲೂ… ನಮ್ಮ ಜಿಲ್ಲೆಯ ಬಿಜೆಪಿಯಲ್ಲಿ ನೀವೇ ಬಳಸಿದಂತಹ ಪದದ ವ್ಯಕ್ತಿಗಳು ಇಲ್ಲವೇ????? ಎಂಬುದಕ್ಕೆ ನೀವೇ ಉತ್ತರಿಸಬೇಕು.
ಕೆ.ಎಲ್.ಹರೀಶ್ ಬಸಾಪುರ.*ಜಿಲ್ಲಾ ಅಧ್ಯಕ್ಷಕಾಂಗ್ರೆಸ್ ಸಾಮಾಜಿಕ ಜಾಲತಾಣ.