Saturday, December 14, 2024
Homeಮಲೆನಾಡು ಕರ್ನಾಟಕಚಿಕ್ಕಮಗಳೂರುತುಂಬಿ ಹರಿಯುತ್ತಿದೆ ಶಿವನಿ

ತುಂಬಿ ಹರಿಯುತ್ತಿದೆ ಶಿವನಿ

ಚಿಕ್ಕಮಗಳೂರು: ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಶಿವನಿ ಸುತ್ತಮುತ್ತಲಿನ ಪ್ರದೇಶದಲ್ಲಿ ನಸುಕಿನಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಶಿವನಿ ಕೆರೆ ತುಂಬಿ ಹರಿಯುತ್ತಿದೆ.

ಸೇತುವೆ ಮೇಲೆ ನೀರು ಹರಿಯುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ತೋಟ, ಹೊಲಗಳಿಗೆ ನೀರು ನುಗ್ಗಿದೆ.
ನಸುಕಿನ 4 ಗಂಟೆಯಿಂದ 6 ಗಂಟೆವರೆಗೆ ಮಳೆ ಸುರಿಯಿತು. ಜಮೀನಿನಲ್ಲಿ ರಾಗಿ. ಮೆಕ್ಕೆ ಜೋಳ ಸಹಿತ ವಿವಿಧ ಬೆಳೆಗಳು ನೆಲಕಚ್ಚಿವೆ.