ಲೇಯ್ಸ್ ಚಿಪ್ಸ್ ತಯಾರಿಸುವ ಪೆಪ್ಸಿಕೊ ಬಹುರಾಷ್ಟ್ರೀಯ ಕಂಪನಿ ಆಲೂಗಡ್ಡೆ ತಳಿ ತನ್ನದು ಎಂದು ಆಲೂಗಡ್ಡೆ ಬೆಳೆದಿದ್ದ ಗುಜರಾತ್ ರೈತರ ಮೇಲೆ ಕೋರ್ಟ್ ಕೇಸು ದಾಖಲಿಸಿ ಬೆಳೆ ಬೆಳೆದಿದ್ದ ರೈತರಿಂದ ಕೋಟ್ಯಾಂತರ ರೂ ಪರಿಹಾರ ಪಡೆಯುವ ಆದೇಶ ಪಡೆದಿತ್ತು.
ಬಹುರಾಷ್ಟ್ರೀಯ ಕಂಪನಿಯ ಈ ದೌರ್ಜನ್ಯದ ವಿರುದ್ಧ ದೇಶದಾದ್ಯಂತ ಪೆಪ್ಸಿಕೋ ಚಿಪ್ಸ್ ಬಹಿಷ್ಕಾರದ ಹೋರಾಟಕ್ಕೆ ರೈತ ಚಳುವಳಿಗಳು ಕರೆ ನೀಡಿದ ಮೇಲೆ ವ್ಯಾಪಾರ ಕುಸಿತದಿಂದ ಕಂಗೆಟ್ಟ ಕಂಪನಿ ಬೇಷರತ್ತಾಗಿ ಕೋರ್ಟ್ ನಿಂದ ಕೇಸ್ ವಾಪಸ್ಸು ಪಡೆದಿತ್ತು.
ಹೋರಾಟವನ್ನು ಇಷ್ಟಕ್ಕೆ ನಿಲ್ಲಿಸದೇ ಆಶಾ ಸ್ವರಾಜ್ ಮುನ್ನೆಡೆಸುತ್ತಿರುವ ಸಂಯುಕ್ತ ಕಿಸಾನ್ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿ ಸದಸ್ಯೆ ಮೇಡಂ ಕವಿತಾ ಕುರುಗುಂಟೆಯವರು ಸಸ್ಯತಳಿಗಳ ಸಂರಕ್ಷಣಾ ಪ್ರಾಧಿಕಾರದ ಮುಂದೆ ಕೇಸು ದಾಖಲಿಸಿದ್ದರು. ವಿಚಾರಣೆ ನಡೆಸಿದ ಪ್ರಾಧಿಕಾರ ಪೆಪ್ಸಿಕೋ ಕಂಪನಿಗೆ ಇದ್ದ ಭೌದ್ಧಿಕ ಹಕ್ಕು ಸ್ವಾಮ್ಯವನ್ನು ರದ್ದುಪಡಿಸಿದೆ. ದೇಶದಾದ್ಯಂತ ಅಖಿಲ ಭಾರತ ಕಿಸಾನ್ ಸಭಾ (AIKS) ರಾಜ್ಯದಾದ್ಯಂತ ಕರ್ನಾಟಕ ಪ್ರಾಂತ ರೈತ ಸಂಘ ಪೆಪ್ಸಿಕೋ ಕಂಪನಿಯ ಬೌದ್ಧಿಕ ಹಕ್ಕು ಸ್ವಾಮ್ಯ ವನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದವು. ಈ ಮಹತ್ವದ ಹೋರಾಟ ನಡೆಸಿದ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನಾಯಕಿಯೂ ಆಗಿರುವ ಕವಿತಾ ಕುರುಗುಂಟಿರವರನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS -AIKS) ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ.
ಬರಹ: ಕಾಮ್ರೇಡ್ ವೆಂಕಟೇಶ್ ಕೋಣಿ