Monday, May 19, 2025
Homeಕಲ್ಯಾಣ ಕರ್ನಾಟಕಕೊಪ್ಪಳಜಮೀನಿನಲ್ಲಿ ಪತ್ತೆಯಾದ ಮೊಸಳೆ

ಜಮೀನಿನಲ್ಲಿ ಪತ್ತೆಯಾದ ಮೊಸಳೆ

ಕೊಪ್ಪಳ: ಕಾರಟಗಿತಾಲೂಕಿನ ಕಕ್ಕರಗೋಳ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಶನಿವಾರ ಸಂಜೆ ಮೊಸಳೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಭೀತಿ, ಆತಂಕ ಹೆಚ್ಚಿಸಿದೆ.

ಭತ್ತದ ಜಮೀನಿನಲ್ಲಿದ್ದ ಮೊಸಳೆ ಕಟಾವು ಮಾಡಲು ಬಂದಿದ್ದ ಯಂತ್ರದ ಸದ್ದಿಗೆ ಹೊರಬಂದಿದೆ. ಕಟಾವು ಯಂತ್ರ ತಾಗಿ ಮೊಸಳೆ ಗಾಯಗೊಂಡಿದ್ದು ಗದ್ದೆಯಲ್ಲಿ ಓಡಾಡಲಾರಂಭಿಸಿತ್ತು. ಇದರಿಂದ ರೈತರು ಕೆಲ ಸಮಯ ಆತಂಕಕ್ಕೊಳಗಾಗಿದ್ದರು. ಬಳಿಕ ಮೊಸಳೆ ಪಕ್ಕದ ಹಳ್ಳಕ್ಕೆ ತೆರಳಿದ್ದರಿಂದ ರೈತರು ನಿಟ್ಟುಸಿರು ಬಿಡುವಂತಾಯಿತು.