Monday, May 19, 2025
Homeಮೈಸೂರು ವಿಭಾಗಮಂಡ್ಯಓಂಶಕ್ತಿ ಯಾತ್ರೆ: ಮತ್ತೆ 43 ಮಂದಿಗೆ ಕೋವಿಡ್

ಓಂಶಕ್ತಿ ಯಾತ್ರೆ: ಮತ್ತೆ 43 ಮಂದಿಗೆ ಕೋವಿಡ್

ಮಂಡ್ಯ: ತಮಿಳುನಾಡಿನ ಓಂಶಕ್ತಿ ದೇವಾಲಯಕ್ಕೆ ತೆರಳಿದ್ದ ಶ್ರೀರಂಗಪಟ್ಟಣ ತಾಲ್ಲೂಕಿನ 43 ಮಂದಿಯಲ್ಲಿ ಕೋವಿಡ್-19 ಪತ್ತೆಯಾಗಿದೆ‌.

ಸೋಮವಾರ 33 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಈಗ ಮತ್ತೆ 43 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ.

ಮಂಗಳವಾರ ಯಾತ್ರೆಯಿಂದ ಬಂದ120 ಮಂದಿ ಭಕ್ತರನ್ನು ಪ್ರತ್ಯೇಕವಾಗಿ ಇರಿಸಿ ಕೋವಿಡ್ ಪರೀಕ್ಷೆ ನಡೆಸಲಾಗಿತ್ತು. ಬುಧವಾರ ಫಲಿತಾಂಶ ಬಂದಿದ್ದು 43 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಶ್ರೀರಂಗಪಟ್ಟಣದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಕೋವಿಡ್ ಕೇರ್ ಕೇಂದ್ರಕ್ಕೆ ಕಳುಹಿಸಲಾಗಿದೆ.

ಇವರು ಅರಕೆರೆ, ಚಂದಗಾಲು ಗ್ರಾಮದಿಂದ ಓಂಶಕ್ತಿ ಯಾತ್ರೆಗೆ ತೆರಳಿದ್ದರು.