Monday, May 19, 2025
Homeಉತ್ತರ ಕರ್ನಾಟಕಬೆಳಗಾವಿಶಾಸಕರಿಂದ ಕರ್ಫ್ಯೂ ನಡುವೆಯೂ ಕಾರ್ಯಕ್ರಮ

ಶಾಸಕರಿಂದ ಕರ್ಫ್ಯೂ ನಡುವೆಯೂ ಕಾರ್ಯಕ್ರಮ

ಬೆಳಗಾವಿ: ಉತ್ತರ ಮತಕ್ಷೇತ್ರದ ಬಿಜೆಪಿ ಶಾಸಕ ಅನಿಲ ಬೆನಕೆ ನೇತೃತ್ವದಲ್ಲಿ ಮುಖಂಡರು ಮತ್ತು ಅಭಿಮಾನಿಗಳು ಧರ್ಮವೀರ ಸಂಭಾಜಿ ಮಹಾರಾಜರ ಪಟ್ಟಾಭಿಷೇಕ ದಿನದ ಸ್ಮರಣಾ ಕಾರ್ಯಕ್ರಮವನ್ನು ಇಲ್ಲಿನ ಸಂಭಾಜಿ ವೃತ್ತದಲ್ಲಿ ವಾರಾಂತ್ಯ ಕರ್ಫ್ಯೂ ನಡುವೆಯೂ ಭಾನುವಾರ ನಡೆಸಿದ್ದಾರೆ.

ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದ್ದಾರೆ. ಜಲಾಭಿಷೇಕ ನೆರವೇರಿಸಿದ್ದಾರೆ. ಮಾಸ್ಕ್ ಧರಿಸದೆ ಒಂದೇ ಕಡೆ 20ಕ್ಕೂ ಹೆಚ್ಚು ಜನರು ಸೇರಿದ್ದರು. ಮಹಾಮಂಗಳರಾತಿ ನೆರವೇರಿಸಿದರು.

ನಗರಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ, ಮುಖಂಡರಾದ ಸುನಿಲ ಜಾಧವ, ನಿಶಾಂತ ಕುಡೆ, ಶ್ರೀನಾಥ ಪವಾರ, ಆದಿತ್ಯ ಪವಾರ, ಓಂಕಾರ ಮೋಹಿತೆ, ಸೌರಭ ಬಾಮನೆ ಮತ್ತಿತರರು ಪಾಲ್ಗೊಂಡಿದ್ದರು.

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿಲ್ಲ.