Monday, May 19, 2025
Homeಸುದ್ದಿಲಾರಿ ಪಲ್ಟಿ: ಮೂವರ ಸಾವು

ಲಾರಿ ಪಲ್ಟಿ: ಮೂವರ ಸಾವು

ಹಾವೇರಿ: ತಾಲ್ಲೂಕಿನ ಕೊರಡೂರು ಗ್ರಾಮದ ಬಳಿ ಸೋಮವಾರ ಮೆಕ್ಕೆಜೋಳ ತುಂಬಿದ್ದ ಲಾರಿ ಪಲ್ಟಿಯಾಗಿ, ಮೂವರು ಹಮಾಲರು ಲಾರಿ ಕೆಳಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಸವಣೂರು ತಾಲ್ಲೂಕಿನ ಇಚ್ಚಂಗಿ ಗ್ರಾಮದ ಮಂಜುನಾಥ ಅಮರಾಪುರ (30), ಆನಂದ ದೇವರಮನಿ (28) ಹಾಗೂ ಮಂಜುನಾಥ ಕಿತ್ತೂರು (28) ಮೃತಪಟ್ಟವರು.

ರಸ್ತೆ ತಿರುವಿನಲ್ಲಿದ್ದ ಗುಂಡಿಯೊಳಗೆ ಚಕ್ರ ಇಳಿದ ಪರಿಣಾಮ ಲಾರಿ ಪಲ್ಟಿಯಾಯಿತು. ಪಲ್ಟಿಯಾದ ಲಾರಿಯನ್ನು ಜೆಸಿಬಿ ಮೂಲಕ ಎತ್ತಿ, ಮೃತದೇಹಗಳನ್ನು ಗ್ರಾಮಸ್ಥರು ಹೊರಗೆ ತೆಗೆದರು.

ಇಚ್ಚಂಗಿ ಗ್ರಾಮದಿಂದ ಗುತ್ತಲಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.