Saturday, December 14, 2024
Homeಮಧ್ಯ ಕರ್ನಾಟಕದಾವಣಗೆರೆವೃದ್ಧ ದಂಪತಿಗಳ ಜೋಡಿ ಕೊಲೆ

ವೃದ್ಧ ದಂಪತಿಗಳ ಜೋಡಿ ಕೊಲೆ

ದಾವಣಗೆರೆ;ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವೃದ್ಧ ದಂಪತಿಗಳನ್ನು ಕೊಚ್ಚಿಕೊಲೆ ಮಾಡಿರುವ ಘಟನೆ ನಡೆದಿದೆ.

ದಾವಣಗೆರೆ ತಾಲೂಕಿನ ಎಲೆ ಬೇತೂರ ಗ್ರಾಮದ
ಗುರುಸಿದ್ದಯ್ಯ (80) ಸರೋಜಮ್ಮ (75) ಕೊಲೆಯಾದ ದಂಪತಿಗಳು.
ಮೂರು ಹೆಣ್ಣು ಮಕ್ಕಳನ್ನ ಮದ್ವೆ ಮಾಡಿ ಕೊಟ್ಟಿದ್ದ ದಂಪತಿಗಳು.ಮನೆಯಲ್ಲಿ ಪತಿ‌ ಪತ್ನಿ ಇಬ್ಬರೇ ವಾಸ ಮಾಡುತ್ತಿರುವುದನ್ನು ತಿಳಿದ ದುಷ್ಕರ್ಮಿಗಳು ತಡರಾತ್ರಿ ಮನೆಗೆ ನುಗ್ಗಿ‌ ಬಾಗಿಲು ಹಾಕಿಕೊಂಡು
ಜೋಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಪಕ್ಕದ ಮನೆಯವರು ಬೆಳಿಗ್ಗೆ ಸರೋಜಮ್ಮ ಅವರನ್ನ ಭೇಟಿ ಮಾಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞ ತಂಡ ಭೇಟಿ ಪರಿಶೀಲನೆ ನಡೆಸಿದರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.