ವಿಜಯನಗರ: ನಟ ದಿವಂಗತ ಪುನೀತ್ ರಾಜಕುಮಾರ್ ನಟನೆಯ ‘ಜೇಮ್ಸ್’ ಚಿತ್ರದ ಟೀಸರ್ ನೋಡಿ ದುಃಖಿತನಾದ ಅಭಿಮಾನಿಯೊಬ್ಬ ಎದೆ ಕೊಯ್ದು ಅಪ್ಪು ಹೆಸರು ಬರೆದುಕೊಂಡು ಅಭಿಮಾನ ಮೆರೆದಿದ್ದಾರೆ.
ಹೊಸಪೇಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಟೀಸರ್ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರ ವೀಕ್ಷಣೆಗೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಿಂದ ಕನಕ ಎಂಬ ಯುವಕ ಬಂದಿದ್ದ. ಟೀಸರ್ ವೀಕ್ಷಿಸಿ ಪುನೀತ್ ನೆನೆದು ಭಾವುಕನಾದ ಯುವಕ ಊರಿಗೆ ಮರಳಿದ ನಂತರ ಎದೆಯ ಮೇಲೆ ಚೂಪಾದ ವಸ್ತುವಿನಿಂದ ರಕ್ತ ಬರುವಂತೆ ಎದೆ ಕೊಯ್ದುಕೊಂಡು ಅಪ್ಪು ಎಂದು ಬರೆದುಕೊಂಡಿದ್ದಾರೆ. ಅಪ್ಪು ನೆನೆಯುತ್ತ ಕಣ್ಣೀರು ಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಕನಕ ಅವರನ್ನು ಸಂಪರ್ಕಿಸಿದಾಗ ಮಾಹಿತಿಗೆ ಲಭ್ಯರಾಗಲಿಲ್ಲ.