ರಾಮನಗರ: ಮೇಕೆದಾಟು ಎರಡನೇ ದಿನದ ಪಾದಯಾತ್ರೆಯು ಬಿಡದಿಯಿಂದ ಸೋಮವಾರ ಆರಂಭಗೊಂಡಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಸೇರಿದಂತೆ ಹಲವು ಮಂದಿ ನಾಯಕರು, ಸಾವಿರಾರು ಕಾರ್ಯಕರ್ತರು ಪಾದಯಾತ್ರೆ ಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ. ತುಮಕೂರು ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಬಿಡದಿಯಿಂದ ಕೆಂಗೇರಿವರೆಗೆ 20 ಕಿ.ಮೀ ಉದ್ದಕ್ಕೆ ನಡಿಗೆ ಮುಂದುವರಿಯಲಿದ್ದು, ರಾಜಧಾನಿ ಬೆಂಗಳೂರು ಪ್ರವೇಶಿಸಲಿದೆ.
ಬಿಡದಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಈ ದಿನ ಪಾದಯಾತ್ರೆ ಬೆಂಬಲಿಸಿ 40ಕ್ಕೂ ಹೆಚ್ಚು ಮಠಾಧೀಶರೂ ಹೆಜ್ಜೆ ಹಾಕಲಿದ್ದಾರೆ ಎಂದರು.
ಸಂಚಾರ ಅಸ್ತವ್ಯಸ್ತ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ನಡೆದಿರುವ ಕಾರಣ ಎರಡನೇ ದಿನವೂ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.