Monday, May 19, 2025
Homeಕರಾವಳಿ ಕರ್ನಾಟಕಉಡುಪಿಫರ್ನಿಚರ್ ಮಳಿಗೆ, ಹೋಟೆಲ್‌ನಲ್ಲಿ ಬೆಂಕಿ ಅವಘಡ

ಫರ್ನಿಚರ್ ಮಳಿಗೆ, ಹೋಟೆಲ್‌ನಲ್ಲಿ ಬೆಂಕಿ ಅವಘಡ

ಉಡುಪಿ: ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿರುವ ಫರ್ನಿಚರ್‌ ಮಳಿಗೆ ಹಾಗೂ ಹೋಟೆಲ್‌ನಲ್ಲಿ ಗುರುವಾರ ಬೆಳಗಿನ ಜಾವ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಗಳು ಬೆಂಕಿಗಾಹುತಿಯಾಗಿವೆ.

ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಸಂಕೀರ್ಣಕ್ಕೆ ವ್ಯಾಪಿಸಿದ್ದು, ಸುಧಾ ಫರ್ನಿಚರ್ ಮಳಿಗೆ ಸಂಪೂರ್ಣವಾಗಿ ಸುಟ್ಟುಹೋಗಿದೆ. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಪ್ರಾಣ ಹಾನಿ ಸಂಭಿವಿಸಲ್ಲ.

ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ.