Sunday, January 5, 2025
Homeಮಲೆನಾಡು ಕರ್ನಾಟಕಶಿವಮೊಗ್ಗಪೊಲೀಸ್ ಠಾಣೆಯ ಬಳಿಯೇ ರೌಡಿ ಶೀಟರ್ ಹತ್ಯೆ

ಪೊಲೀಸ್ ಠಾಣೆಯ ಬಳಿಯೇ ರೌಡಿ ಶೀಟರ್ ಹತ್ಯೆ

ಶಿವಮೊಗ್ಗ: ನಗರದ ರೌಡಿಶೀಟರ್ ಹಂದಿ ಅಣ್ಣಿಯನ್ನು (ಅಣ್ಣಪ್ಪ) ಇಲ್ಲಿನ ವಿನೋಬನಗರದ ಪೋಲಿಸ್ ಚೌಕಿ ಎದುರು ಗುರುವಾರ ಬೆಳಿಗ್ಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ.

ವಿನೋಬ ನಗರ ಪೊಲೀಸ್ ಠಾಣೆಯಿಂದ 100 ಮೀಟರ್ ದೂರದಲ್ಲಿ ಮುಖ್ಯ ರಸ್ತೆಯಲ್ಲಿಯೇ ಆರು ಜನರ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ಹಲ್ಲೆಯಿಂದ ತಲೆ ಒಡೆದು ಹೋಗಿದ್ದು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.

ಹಂದಿ ಅಣ್ಣಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ಹೆಬ್ಬೆಟ್ಟು ಮಂಜನ ಸಹವರ್ತಿಯಾಗಿ ಗುರುತಿಸಿಕೊಂಡಿದ್ದನು. ನಾಲ್ಕು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು ಎಂದು ತಿಳಿದುಬಂದಿದೆ.