Monday, May 19, 2025
Homeಉದ್ಯೋಗಕೆಎಸ್ಆರ್ ಟಿಸಿಗೆ ಗ್ರೀನ್ ಟೆಕ್ ಎಚ್ ಆರ್ ಪ್ರಶಸ್ತಿ

ಕೆಎಸ್ಆರ್ ಟಿಸಿಗೆ ಗ್ರೀನ್ ಟೆಕ್ ಎಚ್ ಆರ್ ಪ್ರಶಸ್ತಿ

ಬೆಂಗಳೂರು: ಕೆ.ಎಸ್. ಆರ್. ಟಿ ಸಿ ಗೆ ಮಾನವ ಸಂಪನ್ಮೂಲ ವರ್ಗದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ ಕೈಗೊಂಡಿರುವ ಪರಿವರ್ತಿತ ಕಾರ್ಯಸಾಧನೆಗೆ ಗ್ರೀನ್ ಟೆಕ್ ಫೌಂಡೇಷನ್ ರವರು ನೀಡುವ ಗ್ರೀನ್ ಟೆಕ್ ಎಚ್ ಆರ್ ಪ್ರಶಸ್ತಿ ಲಭಿಸಿರುತ್ತದೆ.

ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಇರುವ ಹೋಟೆಲ್ ರಾಡಿಸನ್ ಬ್ಲೂ ಪ್ಲಾಜಾ ದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಡಾ. ( ಪ್ರೊ) ಜಗದೀಶ್ ಮುಖಿ, ಮಾಜಿ ರಾಜ್ಯಪಾಲರು ಅಸ್ಸಾಂ ಹಾಗೂ ಕಮಲೇಶ್ವರ್ ಶರಣ್, ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ, ಗ್ರೀನ್ ಟೆಕ್ ಫೌಂಡೇಷನ್ ರವರು, ನಿಗಮದ ಶ್ರೀಮತಿ ಹೆಚ್.ಡಿ. ಗೌರಾಂಭ, ಮುಖ್ಯ ಕಾರ್ಮಿಕ ಕಲ್ಯಾಣ ಅಧಿಕಾರಿ ಹಾಗೂ ಹೆಚ್. ಗುರುರಾಜ್, ಉಪ ಮುಖ್ಯ ಗಣಕ ವ್ಯವಸ್ಥಾಪಕರು, ರವರಿಗೆ ನಿಗಮದ ಪರವಾಗಿ ಪ್ರಶಸ್ತಿ ಪ್ರದಾನ ಮಾಡಿದರು.