Saturday, December 14, 2024
Homeವೈವಿಧ್ಯಕೃಷಿಹಿಂಬಾಗಿನಿಂದ ಬರುತ್ತಿರುವ ಮೂರು ಕೃಷಿ ಕಾಯ್ದೆಗಳು: ಪಿ.ಸಾಯಿನಾಥ್ ಆತಂಕ

ಹಿಂಬಾಗಿನಿಂದ ಬರುತ್ತಿರುವ ಮೂರು ಕೃಷಿ ಕಾಯ್ದೆಗಳು: ಪಿ.ಸಾಯಿನಾಥ್ ಆತಂಕ

ಬೆಂಗಳೂರು: ರೈತರು ಹೋರಾಟದಿಂದ ಹಿಮ್ಮೆಟ್ಟಿಸಿದ ಮೂರು ಕೃಷಿ ಕಾಯ್ದೆಗಳು ಹಿಂಬಾಗಿಲಿನಿಂದ ಬರುತ್ತಿವೆ ಎದು ಖ್ಯಾತ ಪತ್ರಕರ್ತ ಪಿ.ಸಾಯಿನಾಥ್ ಆತಂಕ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳು ಸಂವಿಧಾನದ ಆಶಯಕ್ಕೆ ದಕ್ಕೆ ಉಂಟು ಮಾಡಿವೆ. ಈ ಕಾಯ್ದೆಯಿಂದ ತೊಂದರೆಗೆ ಒಳಗಾದವರು ಕಾಯ್ದೆಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ. ಹಾಗಾದರೆ ಕಾಯ್ದೆಗಳು ಬಡವರಪರವಾಗಿರದೆ ಅದಾನಿ, ಅಂಬಾನಿ ಸೇರಿದಂತೆ ಉದ್ದಿಮೆಗಳ ರಕ್ಷ ಕವಚವಾಗಿವೆ ಎಂದರು. ಬೆಂಗಳೂರು ನಗರದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಆಯೋಜಿಸಿದ ಪರ್ಯಾಯ ಕೃಷಿ ಧೋರೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈ ಮಸೂದೆ ಭೂ ದಾಖಲೆಗಳಿಗೆ ಸಂಬಂಧಿಸಿದ ಪರಿಣಾಮ ರೈತರು ಸೇರಿದಂತೆ ಇತರ ವಲಯದ ಜನರ ಪರವಾಗಿ ಕಾಯ್ದೆ ವಿರುದ್ಧ ವಕೀಲರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವಂತಿಲ್ಲ. ಇದರಿಂದ ವಕೀಲರು ಕೂಡ ವೃತ್ತಿವನ್ನೇಕಳೆದುಕೊಳ್ಳಬೇಕಾಗುತ್ತದೆ ಎಂದು ಮಸೂದೆಯ ಕರಾಳತೆ ವಿಶ್ಲೇಷಿಸಿದರು. ಗೋ ಹತ್ಯೆ ನಿಷೇಧದಿಂದ ಗ್ರಾಮೀಣ ಭಾಗದಲ್ಲಿ ಶೇ.50ರಷ್ಟು ಆರ್ಥಿಕತೆ ಕುಸಿದಿದೆ. ಹೈನುಗಾರಿಕೆ ನಂಬಿಕೊಂಡ ರೈತರು, ದನದ ಮಾಂಸ ವ್ಯಾಪಾರಿಗಳು, ದಲಿತರು ಬೀದಿಗೆ ಬಿದ್ದಿದ್ದಾರೆ. ಮಹಾರಾಷ್ಟ್ರದ ಕೊಲಾಪುರಿ ಚಪ್ಪಲಿ ಕಂಪನಿ ಸ್ಥಗಿತವಾಗಿದೆ. ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ಅತಿ ಹೆಚ್ಚು ರೈತರ ಸಾಗುವಳಿ ಜಮೀನು ಕಾಪ್ರೋರೇಟ್ ಕಂಪನಿಗಳ ಪಾಲಾಗಿವೆ. ರಾಷ್ಟ್ರೀಯ ಕೃಷಿ ಸಮೀಕ್ಷೆ ಪ್ರಕಾರ ಕೃಷಿಯಿಂದ ಆದಾಯ ಕಡಿಮೆ ಬರುತ್ತಿದೆ.

ಆದರೆ ಪಶುಸಂಗೋಪನೆಯಿಂದ ಬರುವ ಆದಾಯ ಹೆಚ್ಚಳವಾಗುತ್ತಿದೆ. ಎಂದು ಹೇಳಲಾಗುತ್ತಿದೆ. ಆದರೂ ಹೈನುಗಾರಿಕೆಗೆ ಒತ್ತು ನೀಡುತ್ತಿಲ್ಲ. ಕೃಷಿ ಕೂಲಿಕಾರರಿಂದ ಆದಾಯ ಹೆಚ್ಚಿಗೆ ಬರುತ್ತಿದೆ ಹೇಳಿ ಮನರೇಗಾ ಅನುದಾನ ಕಡಿತ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ನೀತಿ ವಿರುದ್ಧ ಆತಂಕ ವ್ಯಕ್ತಪಡಿಸಿದರು. ಡಾ.ಸ್ವಾಮಿನಾಥನ್ ಆಯೋಗದ ವರದಿ ರೈತರಿಗೆ ಪರಿಪೂರ್ಣ ಇಲ್ಲದಿದ್ದರು ರೈತರ ಉತ್ಪಾದನಾ ವಲಯಕ್ಕೆ ಅನುಕೂಲವಾಗಿದೆ. ಆದರೆ ಸರಕಾರ ಪದೇ ಪದೇ ಆಯೋಗ ರಚನೆ ಮಾಡಿ ಡಾ.ಸ್ವಾಮಿನಾಥನ್ ಆಯೋಗವನ್ನು ಹತ್ಯೆ ಮಾಡುತ್ತಿದೆ. ಪರಿಣಾಮ ರೈತರು ಡಾ.ಸ್ವಾಮಿನಾಥನ್ ವರದಿ ಜಾರಿಗಾಗಿ ದೇಶಾದ್ಯಂತ ರೈತ ಆಂದೋಲನ ತೀವ್ರವಾಗಿ ನಡೆಸಬೇಕು ಎಂದು ಕರೆ ನೀಡಿದರು.

ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರ ಮಾತನಾಡಿ, ರೈತರು ಬೆಳೆದ ಬೆಳೆಯ ಉತ್ಪಾದನಾ ವೆಚ್ಚ ವಾಪಸ್ ಬರದೇ ಕರ್ನಾಟಕದಲ್ಲಿ 1 ಲಕ್ಷ ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಎಲ್ಲಾ ವಲಯಗಳ ಉತ್ಪಾದನೆ ಸ್ಥಗಿತಗೊಂಡರೆ ಕೃಷಿ ವಲಯ ಮಾತ್ರ ಉತ್ಪಾದನೆಯಲ್ಲಿ ತೊಡಗಿತ್ತು. ಆದರೂ ಇಂತಹ ವಲಯವನ್ನು ಸರಕಾರ ದೀವಾಳಿ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕೇಂದ್ರ, ರಾಜ್ಯ ಸರಕಾರದ ವಿರುದ್ಧ ಕಿಡಿ ಕಾರಿದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಮ್ಯಾಗ್ಸಸ್ಸೆ ಪುರಸ್ಕೃತ ಖ್ಯಾತ ಪತ್ರಕರ್ತರಾದ ಪಿ.ಸಾಯಿನಾಥ್, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ ಬಯ್ಯಾರೆಡ್ಡಿ ಕಾರ್ಯಕ್ರಮದ ಅಧ್ಯಕ್ಷೆತೆ ವಹಿಸಿದರು, ಅಖಿಲ ಭಾರತ ಕಿಸಾನ ಸಭಾದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಡಿ.ರವೀಂದ್ರ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ ಇದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಯಶವಂತ ಪ್ರಾಸ್ತಾವಿಕ ಭಾಷಣ ಮಾಡಿದರು. ಕೆಪಿ.ಆರ್.ಎಸ್ ರಾಜ್ಯ ಹಣಕಾಸು ಕಾರ್ಯದರ್ಶಿ ಹೆಚ್.ಆರ್.ನವೀನ್ ಕುಮಾರ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷ ಶಾಂತಾರಾಮ ನಾಯಕ ನಿರೂಪಿಸಿದರು.