Saturday, December 14, 2024
Homeವೈವಿಧ್ಯಉದ್ಯಮಪಿಎಂ ಸ್ವ-ನಿಧಿಯಿಂದ ವ್ಯಾಪಾರಿಗಳ ಸಬಲೀಕರಣ: ಡಾ.ಭಗವತ್ ಕೃಷ್ಣರಾವ್ ಕರದ್

ಪಿಎಂ ಸ್ವ-ನಿಧಿಯಿಂದ ವ್ಯಾಪಾರಿಗಳ ಸಬಲೀಕರಣ: ಡಾ.ಭಗವತ್ ಕೃಷ್ಣರಾವ್ ಕರದ್

ಪಿಎಂ ಸ್ವ-ನಿಧಿಯಿಂದ ವ್ಯಾಪಾರಿಗಳ ಸಬಲೀಕರಣ: ಡಾ.ಭಗವತ್ ಕೃಷ್ಣರಾವ್ ಕರದ್ ಬೆಂಗಳೂರು: ದೇಶದ ಎಲ್ಲಾ ಬೀದಿ ಬದಿ ವ್ಯಾಪಾರಿಗಳಿಗೆ ತಮ್ಮ ಕಸಬನ್ನು ನಡೆಸಲು ಪ್ರಧಾನಮಂತ್ರಿ ಸ್ವ- ನಿಧಿ ಯೋಜನೆಯಡಿ ರೂ. 10,000 ವರೆಗೆ ಶೇ. 7 ರಷ್ಟು ಬಡ್ಡಿ ರಹಿತ ಸಾಲವನ್ನು ನೀಡಲಾಗುತ್ತಿದ್ದು, ಇದರಿಂದ ಲಕ್ಷಾಂತರ ಜನ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕೃಷ್ಣರಾವ್ ಕರದ್ ಅವರು ತಿಳಿಸಿದರು. ಅವರು ಇಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾದ 7 ರಾಜ್ಯಗಳ (ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ, ತೆಲಂಗಾಣ, ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಪುದುಚೆರಿ) ಒಂದು ದಿನದ ವಲಯ ಸಮಾವೇಶದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಷಯ ತಿಳಿಸಿದರು. ಕೋವಿಡ್ ಸಂಕಷ್ಟದಿಂದ ಆರ್ಥಿಕ ಸಂಕಷ್ಟಕ್ಕ ಒಳಗಾದ ಬೀದಿ ಬದಿ ವ್ಯಾಪಾರಿಗಳ ಪುನಶ್ಚೇತನಕ್ಕೆ ಆರ್ಥಿಕ, ವಸತಿ ಹಾಗೂ ನಗರಾಭಿವೃದ್ಧಿ ಮಂತ್ರಾಲಯಗಳು ಕೈಜೋಡಿಸಿ ಈ ಪಿಎಂ ಸ್ವ -ನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ತಲುಪುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಜೂನ್ 2020 ರಲ್ಲಿ ಪ್ರಾರಂಭಗೊಂಡ ಈ ಯೋಜನೆಯಡಿ ಬಡತನದ ಕುಟುಂಬಗಳು ಮಧ್ಯಮ ವರ್ಗದ ಕುಟುಂಬಗಳಾಗಿ ಮಾರ್ಪಾಡುಗೊಳ್ಳುವ ಅವಕಾಶವಿದೆ.

ಈ ಯೋಜನೆಯಡಿ ಪ್ರತಿ ವ್ಯಾಪಾರಿಗಳಿಗೆ 10 ಸಾವಿರ ರೂ. ಸಾಲದ ರೂಪದಲ್ಲಿ ಬ್ಯಾಂಕ್ ಮೂಲಕ ದೊರೆಯುವುದಲ್ಲದೆ, ಸರ್ಕಾರ ಇದಕ್ಕೆ ತಗಲುವ ಶೇ. 7 ರಷ್ಟು ಬಡ್ಡಿ ಪಾವತಿಸುತ್ತದೆ. ಇನ್ನುಳಿದ ಬಾಕಿ ಬಡ್ಡಿಯನ್ನು ವ್ಯಾಪರಿಗಳು ಬರಿಸಬೇಕಾಗುತ್ತದೆ. ಡಿಜಿಟಲ್ ಪಾವತಿ ಪ್ರೋತ್ಸಾಹಿಸಲು ಸಹಾಯಧನವನ್ನು ಸಹ ನೀಡಲಾಗುತ್ತದೆ ಎಂದರು. ಪಿಎಂ ಸ್ವ-ನಿಧಿ ಯೋಜನೆಯಡಿ ಬಂದ ಅರ್ಜಿಗಳನ್ನು ಯಾವ ಬ್ಯಾಂಕುಗಳೂ ತಿರಸ್ಕರಿಸುವಂತಿಲ್ಲ. ಈವರಗೆ ದೇಶದಲ್ಲಿ ಒಟ್ಟು 51 ಲಕ್ಷ ಬೀದಿಬದಿ ವ್ಯಾಪಾರಿಗಳಿಗೆ ಪಿಎಂ ಸ್ವ-ನಿಧಿಯಲ್ಲಿ ಸಾಲ ನೀಡುವ ಗುರಿ ಹೊಂದಿದ್ದು, ಇದರಲ್ಲಿ 39 ಲಕ್ಷ ಜನರು ಸಾಲ ಪಡೆದುಕೊಂಡಿದ್ದಾರೆ. ವ್ಯಾಪಾರಿಗಳು ಜನ್-ಧನ್ ಖಾತೆ ತೆಗೆದು ಅದಕ್ಕೆ ಆಧಾರ್ ಜೋಡಣೆ ಮಾಡಿರಬೇಕು. ನಂತರ ನಗರ ಸ್ಥಳೀಯ ಸಂಸ್ಥೆಗಳ ಜೊತೆಗೆ ನೋಂದಣಿಯಾಗಿರಬೇಕು. ಕರ್ನಾಟಕದಲ್ಲಿ 4.40 ಲಕ್ಷ ಫಲಾನುಭವಿಗಳಿಗೆ ಈ ಯೋಜನೆಯಡಿ ಸಾಲ ನೀಡುವ ಗುರಿ ಹೊಂದಿದ್ದು, 3,20,000 ಜನರಿಗೆ ಸಾಲ ನೀಡಿ ಶೇ. 68 ರಷ್ಟು  ಸಾಧನೆ ಮಾಡಲಾಗಿದೆ.

ಕೇರಳ ಈ ಯೋಜನೆಯಲ್ಲಿ ಶೇ.21 ಸಾಧನೆ ಮಾಡಿ ಕೊನೆಯ ಸ್ಥಾನದಲ್ಲಿದೆ. ದೇಶದಲ್ಲಿ ಇದೇ ಡಿಸೆಂಬರ್ ವೇಳೆಗೆ 50 ಲಕ್ಷ ಜನರಿಗೆ ಈ ಯೋಜನೆಯಡಿ ಸಾಲ ನೀಡುವ ಗುರಿ ಹೊಂದಲಾಗಿದ್ದು, ಈಗಾಗಲೇ 43 ಲಕ್ಷ ಜನರಿಗೆ ಸಾಲ ನೀಡಲಾಗಿದೆ. ಭಾರತದ ಆರ್ಥಿಕ ಸ್ಥಾನ ವಿಶ್ವದಲ್ಲಿ 5 ರಿಂದ 3 ಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಜೀವನೋಪಾಯ ಮಿಷನ್ ನಿರ್ದೇಶಕರಾದ ಡಾ. ರಾಗಪ್ರಿಯ.ಆರ್ ಅವರು ಡಾ.ರಾಗಪ್ರಿಯ ಆರ್,   ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಜಂಟಿ ಕಾರ್ಯದರ್ಶಿ ರಾಹುಲ್ ಕಪೂರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.