ಕೊಡಗು: ಸೋಮವಾರಪೇಟೆ ತಾಲ್ಲೂಕಿನ ಅಡಿಯನಾಡೂರು ಗ್ರಾಮದ ಕಾಡಾನೆ ದಾಳಿ ಮಾಡಿದ್ದು, ರೈತ ಮೃತಪಟ್ಟಿದ್ದಾರೆ.
ಅಡಿಯನಾಡೂರು ಈರಪ್ಪ(63) ಮೃತಪಟ್ಟವರು.
ಶುಕ್ರವಾರ ಬೆಳಿಗ್ಗೆ ತಮ್ಮ ಕೃಷಿ ಭೂಮಿಗೆ ತೆರಳಿ ಹಿಂದಿರುಗುತ್ತಿದ್ದಾಗ ಗೌರಿಗದ್ದೆ ಸಮೀಪ ಪಕ್ಕದ ಅರಣ್ಯದಿಂದ ಬಂದ ಕಾಡಾನೆ ದಾಳಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.