ಚಾಮರಾಜನಗರ: ಶಕುನಿದೊಡ್ಡಿ ಗ್ರಾಮದ ಬಳಿ ಇರುವ ಶಿಂಷಾ ನದಿ (ಬೆಂಕಿ) ಜಲಪಾತದಲ್ಲಿ ಈಜಾಡಲು ಹೋದ ಯುವಕ ಮೃತಪಟ್ಟಿದ್ದಾರೆ.. ಚಾಮರಾಜನಗರ ಜಿಲ್ಲೆಯ ಹನೂರು ತಾಲೋಕಿನ ಭದ್ರೇನಹಳ್ಳಿ ಗ್ರಾಮದ ಮಾರಪ್ಪ ಶೆಟ್ಟಿಯವರ ಪುತ್ರ ಮನು ಕುಮಾರ್ (25) ಮೃತ ಯುವಕ. ಖಾಸಗಿ ಬಸ್ ಚಾಲಕನಾಗಿರುವ ಮನು ಕಳೆದ ಏಳು ವರ್ಷಗಳಿಂದ ಹಲಗೂರಿನಲ್ಲಿ ವಾಸವಾಗಿದ್ದರು. ಶುಕ್ರವಾರ ಮಹಾಲಕ್ಷ್ಮಿ ಹಬ್ಬದ ರಜೆ ಇದ್ದ ಕಾರಣ ಮನು ಕುಮಾರ್ ತನ್ನ ಮೂವರು ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದರು. ಜಲಪಾತದ ಬಳಿ ನದಿಗೆ ಇಳಿದು ಈಜಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಸ್ಥಳೀಯ ಈಜುಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹದ ಶೋಧ ಕಾರ್ಯ ಮಾಡುತ್ತಿದ್ದು, ಶನಿವಾರ ಮಧ್ಯಾಹ್ನದ ವರೆಗೂ ಮೃತದೇಹ ಪತ್ತೆಯಾಗಿಲ್ಲ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಲಪಾತದಲ್ಲಿ ಈಜಲು ಹೋದ ಯುವಕ ಸಾವು
Previous articleರೈತನ ಮೇಲೆ ಕಾಡು ಕೋಣ ದಾಳಿ: ರೈತ ಗಂಭೀರ
Next articleಪತಿಗೆ ಬುದ್ಧಿ ಕಲಿಸಲು ಕಳವು ನಾಟಕವಾಡಿದ ಪತ್ನಿ