ಬೆಂಗಳೂರು; ಪೀಣ್ಯದಲ್ಲಿ ಇರುವ ಇಸ್ರೋ ಕಮಾಂಡಿಂಗ್ ಕೇಂದ್ರಕ್ಕೆ ಬರುವಾಗ ಮೋದಿ ರೋಡ್ ಶೋ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಲಿಯ ಹೊರಗಿನಿಂದ ನೋಡುತ್ತಿರುವುದು ಈಗ ವೈರಲ್ ಆಗಿದೆ. ಅವರ ಜತಗೆ ಮಾಜಿ ಸಚಿವರಾದ ಆರ್. ಅಶೋಕ್, ಮುನಿರತ್ನ, ಗೋಪಾಲಯ್ಯ ಕೂಡಾ ಇದ್ದ ಫೋಟೊ ಎಲ್ಲೆಡೆ ಹರಿದಾಡುತ್ತಿದೆ. ಕನಿಷ್ಠ ಗೌರವ ಕೂಡ ಇಲ್ಲದ ಪರಿಸ್ಥಿತಿ ಉಂಟಾಗಲು ಕಾರಣವೇನು ಎಂದು ವಿಮರ್ಶೆಗಳು ನಡೆಯುತ್ತಿವೆ. ರಾಜ್ತದಲ್ಲಿ ಬಿಜೆಪಿ ಸೋತಿರುವುದರಿಂದ ಮೋದಿ ಇಲ್ಲಿಯ ನಾಯಕರನ್ನು ಕಣ್ಣೆತ್ತಿಯೂ ನೋಡಿಲ್ಲ. ಅವರನ್ನು ಮೂಲೆಗುಂಪು ಮಾಡಿದ್ದಾರೆ. ಆದರೆ ಸ್ವಾಭಿಮಾನವೇ ಇಲ್ಲದ ಇಲ್ಲಿಯ ನಾಯಕರು ಬೇಲಿಯಾಚೆ ನಿಂತು ಕೈಬೀಸುತ್ತಿದ್ದಾರೆ ಎಂದು ಹಲವರು ವ್ಯಂಗ್ಯವಾಡಿದ್ದಾರೆ. ಮೋದಿ ನಿರಂಕುಶ: ತನ್ನದೇ ಪಕ್ಷದ ನಾಯಕರನ್ನು ಈ ರೀತಿ ನಡೆಸಿಕೊಂಡಿರುವುದು ಮೋದಿಗೆ ಶೋಭೆಯಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಸ್ವಾಗತಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು ಬರುವುದು ಬೇಡ ಎಂದು ಹೇಳಿ ಒಬ್ಬರೇ ಶೋ ಮಾಡಿದ್ದಾರೆ ಎಂದು ಹಲವರು ಅಣಕವಾಡಿದ್ದಾರೆ. ಅನೆರಿಕ ಸಹಿತ ಬೇರೆ ದೇಶಗಳಲ್ಲಿ ಇಂಥ ಉಡಾವಣೆಗಳು ಯಶಸ್ವಿಯಾದರೆ ವಿಜ್ಞಾನಿಗಳನ್ನು ಮೆರವಣಿಗೆ ಮಾಡುತ್ತಾರೆ. ನಮ್ಮಲ್ಲಿ ಪ್ರಧಾನಿ ರೋಡ್ ಶೋ ಮಾಡುತ್ತಾರೆ. ವಿಜ್ಞಾನಿಗಳು ಮರೆಯಲ್ಲಿರುತ್ತಾರೆ ಎಂದು ಜನರು ಟೀಕಿಸಿದ್ದಾರೆ.