ನಾವು ಯೋಚಿಸುವಂತೆ ನಮ್ಮ ಸುತ್ತ ಮುತ್ತಲು ತರಂಗಗಳು ರಚಿಸಲ್ಪಡುತ್ತವೆ. ನಾವೇ ರಚಿಸಿದ ಅಂತಹ ತರಂಗಗಳು ಇರುವ ವಾತಾವರಣದಲ್ಲಿ ನಾವೇ ಜೀವಿಸುತ್ತೇವೆ. ನಮ್ಮ ಜೊತೆಗೆ ನಮ್ಮ ಮನೆಯವರಿಗೂ ಆ ತರಂಗಗಳು ಪ್ರಭಾವ ಬೀರುತ್ತವೆ. ಹೀಗಿರುವಾಗ ನಮ್ಮ ಯೋಚನೆಗಳು ಹೇಗಿರಬೇಕು?
ನಾವು ಹೇಳುತ್ತೇವೆ ಈಗಿನ ಮಕ್ಕಳು ನಮ್ಮಷ್ಟು ಗಟ್ಟಿ ಮನಸಿನವರಲ್ಲ, ಬೇಗನೇ ಒತ್ತಡ, ಖಿನ್ನತೆಗೆ ಒಳಗಾಗುತ್ತಾರೆ ಎಂದು. ಇಂತಹ ಬಲಹೀನ ವಾತಾವರಣದಿಂದ ಅವರನ್ನು ಹೊರ ತರಲು ನಾವು ಎಷ್ಟು ಶಕ್ತಿಶಾಲಿ ಯೋಚನೆಗಳನ್ನು ಸದಾ ಮಾಡುತ್ತಿರಬೇಕು ಅಲ್ವೆ ಆತ್ಮೀಯರೇ?
ಚಿಕ್ಕ ಚಿಕ್ಕ ಮಕ್ಕಳೇ ಒತ್ತಡದಲ್ಲಿರುವೆ ಎಂದು ಹೇಳುತ್ತಾರೆ …. ವಿದ್ಯಾರ್ಥಿ ಜೀವನ ಗೋಲ್ಡನ್ ಜೀವನ ಎನ್ನುವುದು ಈಗ ಹೊರಟು ಹೋಗಿ ಒತ್ತಡಭರಿತ ಜೀವನ ಎನ್ನುವಂತಾಗಿದೆ. ಯಾರಿಗೆ ಒತ್ತಡ ಹೆಚ್ಚು ಇರುವುದೋ ಅವರೇ ಹೆಚ್ಚು ಪರಿಶ್ರಮ ಪಟ್ಟು ಓದುತ್ತಿದ್ದಾರೆ ಎಂಬುವಷ್ಟು ನಂಬಿಕೆ ಬಂದು ಬಿಟ್ಟಿದೆ. ಎಲ್ಲರೂ ಹಾಗಾಗಿ ಒತ್ತಡವಿದೆ ಎಂದು ಹೇಳತೊಡಗಿದರು. ಇಂದು ಪ್ರತಿ ಕೆಲಸಕ್ಕೂ ಮೊದಲು ಒತ್ತಡವಿದೆ ಎನ್ನುವುದು ಸಾಮಾನ್ಯವಾಗಿ ಹೋಗಿದೆ
ಇತ್ತೀಚಿಗೆ ಖಿನ್ನತೆ(depression) ಅನ್ನುವುದು ಸಾಮಾನ್ಯವಾಗಿ ಬಿಟ್ಟಿದೆ.
ಈ ಶಬ್ದಗಳನ್ನು ಹಾಗಾಗಿ ಮನೆಯಲ್ಲಿ ಬಳಸುವುದು ಬೇಡ. ಈ ಶಬ್ದಗಳು ಮನಸ್ಸಿನ ಶಕ್ತಿಯನ್ನು ಕುಂದಿಸುತ್ತವೆ…
👉ಪ್ರತಿದಿನ ಉತ್ಸವದ ದಿನದ ರೀತಿ ಆಚರಿಸೋಣ.
👉ಹಬ್ಬದ ದಿನದಂತೆ ಖುಷಿಯನ್ನು ಹಂಚೋಣ.
👉ನಾನು ಇಂದು ಖುಷಿಯಾಗಿ ಇದ್ದೇನೆ ಎಂದು ದಿನವೂ ಹೇಳೋಣ.
👉ಪರೀಕ್ಷೆ ಇದೆ ನಿನಗೆ ಟೆನ್ಶನ್, ಒತ್ತಡ ಇಲ್ಲವೇ ಓದು ಹೋಗು ಎಂದು ಮಕ್ಕಳಿಗೆ ಹೇಳುವ ಬದಲು, ಕೇವಲ ಪರೀಕ್ಷೆಗಾಗಿ ಓದು ಎಂದು ಹೇಳಬೇಕು. ಒತ್ತಡದಿಂದ ಇದ್ದರೆ ಚೆನ್ನಾಗಿ ಓದಿ ಒಳ್ಳೆಯ ಅಂಕ ತರಲು ಸಾದ್ಯವೇ? ನಾವು ಮಾಡುವ ಕೆಲಸದಲ್ಲಿ ಖುಷಿಯನ್ನು ಕಾಣಲು ಸಾಧ್ಯವೇ?
ಓಂ ಶಾಂತಿ
ಸಿಸ್ಟರ್ ಶಿವಾನಿ