Monday, May 19, 2025
Homeಬೆಂಗಳೂರು ವಿಭಾಗಬೆಂಗಳೂರು ನಗರಕೆ.ಎಸ್.ಆರ್.ಟಿ‌.ಸಿ‌ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿಗಳ ಗರಿ

ಕೆ.ಎಸ್.ಆರ್.ಟಿ‌.ಸಿ‌ ಮುಡಿಗೆ ಮತ್ತೆ ನಾಲ್ಕು ಪ್ರಶಸ್ತಿಗಳ ಗರಿ

ಬೆಂಗಳೂರು: ವೀ ಕನೆಕ್ಟ್ ಇಂಡಿಯಾ ಮೀಡಿಯಾ ಅಂಡ್ ರಿಸರ್ಚ್ ಸ್ಥಾಪಿಸಿರುವ Asia’s Best Quality ಪ್ರಶಸ್ತಿಯು ಕೆ‌ ಎಸ್ ಆರ್ ಟಿ‌ ಸಿಗೆ ನಾಲ್ಕು ವರ್ಗದಲ್ಲಿ ಲಭಿಸಿರುತ್ತದೆ. ಬ್ಯ್ರಾಡಿಂಗ್ ಮತ್ತು ಮಾರ್ಕೆಟಿಂಗ್, ಸಾರಿಗೆ ಸುರಕ್ಷತೆ, ಕಾರ್ಮಿಕ ಸ್ನೇಹಿ‌ ಉಪಕ್ರಮಗಳು ಹಾಗೂ ಮಾಹಿತಿ ತಂತ್ರಜ್ಞಾನ ವರ್ಗಗಳಲ್ಲಿ ನಿಗಮವು ಪ್ರಶಸ್ತಿಗೆ ಆಯ್ಕೆಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 29ನೇ ಸೆಪ್ಟೆಂಬರ್ 2023 ರಂದು ದೆಹಲಿಯ ವಿಮಾನ ನಿಲ್ದಾಣದಲ್ಲಿನ ರಾಡಿಸನ್ ಬ್ಲೂ ಪ್ಲಾಜಾದಲ್ಲಿ ನಡೆಯಲಿದ್ದು, ಸಮಾರಂಭದಲ್ಲಿ ಶ್ರೀ ಜ್ಯೋತಿರಾದಿತ್ಯ ಸಿಂಧ್ಯಾ,‌ಮಾನ್ಯ ನಾಗರಿಕ ವಿಮಾನಯಾನ ಸಚಿವರು, ಭಾರತ ಸರ್ಕಾರ ಹಾಗೂ ಶ್ರೀ ರಾಮದಾಸ್ ಅತಾವಳೆ, ಮಾನ್ಯ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ರಾಜ್ಯ ಸಚಿವರು,ಭಾರತ ಸರ್ಕಾರ ರವರು ಉಪಸ್ಥಿತರಿರುತ್ತಾರೆ.