Monday, May 19, 2025
Homeರಾಜ್ಯಕಲ್ಯಾಣ ಕರ್ನಾಟಕಪಪ್ಪಾಯಿ ಬೆಳೆದು ಕಮರಿದ ಕನಸು

ಪಪ್ಪಾಯಿ ಬೆಳೆದು ಕಮರಿದ ಕನಸು

ಹುಲಸೂರ: ತಾಲ್ಲೂಕಿನ ಗ್ರಾಮದ ರೈತ ಓಂಕಾರ ಪಾಟೀಲ್‌ ತನ್ನ ಇರುವ ಮೂರೂವರೆ ಎಕರೆ ಜಮೀನನಲ್ಲಿ ಎರಡು ಎಕರೆ ಪ ಪ್ಪಾಯಿ ಬೆಳೆ ಬೆಳೆದು ಅದರಲ್ಲಿ ಸಂಪಾದನೆ ಮಾಡಿ ಜೀವನ ನಡೆಸುವ ಕನಸು ಕಂಡಿದ್ದ ರೈತನಿಗೆ ತುಂಬಾ ಕನಸ್ಸುಗಳು ಕಟ್ಟಿಕೊಂಡಿದ್ದ ರೈತ ಅತಿ ಮಳೆಗೆ ಕೊಚ್ಚಿಕೊಂಡು ಹೋದ ಪಪ್ಪಾಯಿ ಕಂಡು ಕಣ್ಣೀರಿಡುತ್ತಿದ್ದಾರೆ. ಕಂಡ ಕನಸು ಕಮರಿ ಹೋಗಿದೆ.

ಇಲ್ಲಿನ ರೈತ ಓಂಕಾರ ಪಾಟೀಲ ಮತ್ತು ಅವರ ಮಗ ಬಸವರಾಜ ಪಾಟೀಲ ಬೆಳೆ ಕಳೆದುಕೊಂಡು ಕಂಗಾಲಾದವರು.

ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಪಪ್ಪಾಯಿ ಬೆಳೆದಿದ್ದರು. ಪಪ್ಪಾಯಿ ಸಸಿಗಳು ಉತ್ತಮವಾಗಿ ಬೆಳೆದು ನಿಂತಿದ್ದವು. ಈ ಬಾರಿ ಉತ್ತಮ ಬೆಳೆ ಕೈ ಸೇರಲಿದೆ ಎನ್ನುವ ಹೊತ್ತಿಗೆ ಅತಿಯಾದ ಮಳೆ ಬಂದು ಬಿಟ್ಟಿತು. ಅಲ್ಲದೇ ಗ್ರಾಮದ ಸಮೀಪದ ಚುಳಕಿ ನಾಲಾದಿಂದ ನುಗ್ಗಿದ ನೀರು ಕೂಡಾ ನುಗ್ಗಿ ಪೂರ್ತಿ ಬೆಳೆ ಹಾಳಾಯಿತು.